ಜಿಲ್ಲೆ

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ 235.93 ಲಕ್ಷ ರೂ.ನಿವ್ವಳ ಲಾಭ

Mangaluru - Hariprasad Rai



ಮಂಗಳೂರು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಇದರ ವಾರ್ಷಿಕ ಸಾಮಾನ್ಯ ಸಭೆ ಸಂಘದ ಅಧ್ಯಕ್ಷ
ಚಿತ್ತರಂಜನ್ ಬೋಳಾರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು. 2022-23ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಮಂಡಿಸಿದರು.
ಸಂಘದ ಅಧ್ಯಕ್ಷ ಚಿತ್ತರಂಜನ್‌ಬೋಳಾರ್ ಮಾತನಾಡಿ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಸಂಘ ಒಟ್ಟು 30 ಶಾಖೆಗಳನ್ನು ಹೊಂದಿದೆ. 2023-24ನೇ ಸಾಲಿನಲ್ಲಿ ಹೊಸ ಶಾಖೆಗಳನ್ನು ತೆರೆದು 250 ಕೋಟಿ ರೂ.ಮಿಕ್ಕಿ ಠೇವಣಿ ಸಂಗ್ರಹ ಹಾಗೂ 200 ಕೋಟಿ ರೂ.ಮಿಕ್ಕಿ ಸಾಲ ನೀಡುವ ಗುರಿ ಹೊಂದಿದೆ ಎಂದರು.
ಸಂಘವು ವರದಿ ಸಾಲಿನಲ್ಲಿ 2000 ಕೋಟಿ ರೂ.ಮೀರಿ ವ್ಯವಹಾರ ನಡೆಸಿದ್ದು, 235.93 ಲಕ್ಷ ರೂ.ನಿವ್ವಳ ಲಾಭಗಳಿಸಿದೆ. ಸಂಘದ ಸದಸ್ಯರಿಗೆ ವರದಿ ಸಾಲಿನಲ್ಲಿ ಶೇ.11 ಡಿವಿಡೆಂಡ್ ಘೋಷಿಸಲಾಗಿದೆ ಎಂದು ಅವರು ತಿಳಿಸಿದರು.
ಪ್ರತಿಭಾ ಪುರಸ್ಕಾರ:
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರಾದ ಎಸ್.ಶೀನ ಪೂಜಾರಿ, ಗೋಕುಲ್ ಕದ್ರಿ, ಯೋಗಿಶ್ ಪೂಜಾರಿ ಕಡ್ತಿಲ, ಹರೀಶ್ ಮುಂಡೋಳಿ, ಭಾಸ್ಕರ್ ಕೋಟ್ಯಾನ್, ರಾಕೇಶ್ ಕುಂಜೂರು, ವಸಂತ ಕಾರಂದೂರು,ದಿನೇಶ್ ಆಂಚನ್ ಮತ್ತು ಚಂದ್ರಹಾಸ ಕಟ್ಟಪುಣಿ ಇವರುಗಳನ್ನು ಸನ್ಮಾನಿಸಲಾಯಿತು.
ಸಂಘದ ಸದಸ್ಯರ ಸಾಧಕ ಮಕ್ಕಳಾದ ಡಾ.ನೇಹಲ್ ನೇಮಿರಾಜ್, ತನ್ಮಯ್ ಸುಮನ್, ವೈಭವಿ ವಿ.ಎಸ್, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ಆತ್ಮಿ ಕೆ, ಭಗತ್ ಸುವರ್ಣ , ಲಹರಿ ಎಂ.ರಾಯಿ , ಪಿ.ಯು.ಸಿ ಪರೀಕ್ಷೆಯಲ್ಲಿ ಸಾಧನೆಗೈದ ಡ್ಯಾಫ್ನಿ ಮೆಲೋರಾ ಡಿಸೋಜ,ಮೆಲ್ ಗ್ಲಿಸ್ಟನ್ ಕಾರ್ಯಪ್ಪ ಹಾಗೂ ಯತೀಕ್ಷ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಂಘದ ನಿರ್ದೇಶಕರಾದ ಜಿ.ಪರಮೇಶ್ವರ ಪೂಜಾರಿ, ಆನಂದ್ ಎಸ್ ಕೊಂಡಾಣ, ಸೀತಾರಾಮ್ ಎನ್, ರಮಾನಾಥ್ ಸನಿಲ್, ಮುದ್ದು ಮೂಡುಬೆಳ್ಳೆ, ಬಿ.ಪಿ. ದಿವಾಕರ್, ಗೋಪಾಲ್ ಎಂ., ಚಂದ್ರಾವತಿ ಮತ್ತು ಉಮಾವತಿ ಉಪಸ್ಥಿತರಿದ್ದರು.
ಉಪಾಧ್ಯಕ್ಷ ನೇಮಿರಾಜ್ ಪಿ. ವಂದಿಸಿದರು.ಮಾನವ ಸಂಪನ್ಮೂಲ ದೀಪಿಕ ಸನಿಲ್ ಮತ್ತು ಹರ್ಷಿತ ಕಾರ್ಯಕ್ರಮ ನಿರೂಪಿಸಿದರು.