ಮೂಲ್ಕಿ: ಮಕ್ಕಳ ಬೆಳವಣಿಗೆಗೆ ತಾಯಿಯ ಹಾಲು ಮತ್ತು ಪೌಷ್ಟಿಕ ಆಹಾರ ಸೇವನೆ ಅಗತ್ಯ. ಸ್ವಚ್ಛತೆ ಹಾಗೂ ಪರಿಸರಸ್ನೇಹಿಯಾಗಿ ಸಾವಯವ ಆಹಾರ ಬಳಕೆಯ ಮೂಲಕ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಿ ಎಂದು ಮೂಲ್ಕಿ ನಪಂ ಅಧ್ಯಕ್ಷ ಸತೀಶ್ ಅಂಚನ್ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು (ಗ್ರಾ) ಮೂಲ್ಕಿ ನಪಂ, ಅದಾನಿ ಫೌಂಡೇಶನ್ ಮಂಗಳೂರು, ಕೆಮ್ರಾಲ್ ಪ್ರಾಥಮಿಕ ಅರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮ ಕಾರ್ನಾಡು ಅಮೃತಾನಂದಮಯಿ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಆರೋಗ್ಯ ನಿರೀಕ್ಷಕಿ ರಕ್ಷಿತಾ, ಆರೋಗ್ಯ ಸುರಕ್ಷಾಧಿಕಾರಿ ಮಾರ್ಗರೆಟ್, ಅಧಾನಿ ಸಂಸ್ಥೆಯ ಪ್ರೇಮಾ, ಶಿಶು ಅಭಿವೃದ್ಧಿ ಇಲಾಖೆ ಹಿರಿಯ ಮೇಲ್ವಿಚಾರಕಿ ಭಾರತಿ, ಅಂಬೇಡ್ಕರ್ ಭವನದ ಭೀಮರಾವ್ ವೇದಿಕೆಯ ಉಪಾಧ್ಯಕ್ಷ ಸಂಜೀವ, ಸಮುದಾಯ ಆರೋಗ್ಯ ಕೇಂದ್ರದ ಸಮಿತಿ ಸದಸ್ಯ ರಮೇಶ್, ಆರೋಗ್ಯ ಇಲಾಖೆಯ ಮಂಜುಳಾ ಉಪಸ್ಥಿತರಿದ್ದರು.
ಬಳಿಕ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು. ಅಂಗನವಾಡಿ ಕಾರ್ಯಕರ್ತೆ ಕುಸುಮಾ ಮತ್ತು ಸುಮತಿ ನಿರೂಪಿಸಿ, ವಂದಿಸಿದರು.