ಜಿಲ್ಲೆ

ತುಳುನಾಡ ಸಂಸ್ಕೃತಿ ಅರಿವು ಶ್ಲಾಘನೀಯ: ಉದ್ಯಮಿ ಪ್ರಕಾಶ್ ಬಿ. ಮೆಚ್ಚುಗೆ

ಸೌಮ್ಯ ಆರ್

ಉಪ್ಪಿನಂಗಡಿ: ತುಳುನಾಡ ಸಂಸ್ಕೃತಿಯನ್ನು ಎಳೆಯ ಮಕ್ಕಳಿಗೆ ತಿಳಿಸುವ ಕಾರ್ಯ ಶ್ಲಾನೀಯ ಎಂದು ಉದ್ಯಮಿ ಪ್ರಕಾಶ್ ಬಿ. ಹೇಳಿದರು.

ಇಳಂತಿಲ ಶ್ರೀ ಕೇಶವ ಶಿಶು ಮಂದಿರದಲ್ಲಿ ಶ್ರೀಭಾರತಿ ಮಾತೃ ಮಂಡಳಿ ಪ್ರಾಯೋಜಕತ್ವದಲ್ಲಿ ಶನಿವಾರ ಆಟಿದ ಅಟಿಲ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖ್ಯ ಶಿಕ್ಷಕ ಲೋಕೇಶ್ ಬೆತ್ತೋಡಿ ಉಪನ್ಯಾಸ ನೀಡಿದರು. ಮಾತೃ ಮಂಡಳಿ ಅಧ್ಯಕ್ಷೆ ಗೀತಾ ಯತೀಶ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು.

ಪಂಚಾಯಿತಿ ಮಾಜಿ ಅಧ್ಯಕ್ಷ ತಿಮ್ಮಪ್ಪ ಇಳಂತಿಲ, ವಾಣಿಶ್ರೀ ಗೆಳೆಯರ ಬಳಗದ ಪ್ರೀತಮ್ ಅಕಾಶ್, ಶಿಶು ಮಂದಿರದ ಅಧ್ಯಕ್ಷ ಗಣೇಶ್ ಭಟ್ ಮುಡಾಜೆ, ಕಾರ್ಯದರ್ಶಿ ರವೀಂದ್ರ ಇಳಂತಿಲ, ಸದಸ್ಯರಾದ ಗಿರೀಶ್ ಅರ್ಬಿ, ಶಂಕರ್ ಭಟ್ ನಿಡ್ಡಾಜೆ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಹೊನ್ನಪ್ಪ ಪೊಟ್ಟುಕೆರೆ, ರಮೇಶ್ ಶ್ರೀದುರ್ಗ ಮೊದಲಾದವರಿದ್ದರು. ಶಕುಂತಳಾ ಸ್ವಾಗತಿಸಿದರು. ಭವ್ಯ ಉಮೇಶ್ ನಿರೂಪಿಸಿದರು. ಯಶಸ್ವಿನಿ ನವೀನ್ ವಂದಿಸಿದರು.