ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಯುವವಾಹಿನಿ ಕೇಂದ್ರ ಸಮಿತಿಯ ಮಹಿಳಾ ಘಟಕದ ಪೂರ್ವಾಧ್ಯಕ್ಷೆ ಶುಭಾ ರಾಜೇಂದ್ರ ಉದ್ಘಾಟಿಸಿದರು. ನವೀನ್ ಬೆಂಜನಪದವು, ವನಿತಾ ಚಂದ್ರಹಾಸ, ಜಯಪ್ರಕಾಶ್ ಪಾಣೆಮಜಲು ಇದ್ದರು.
- ನವೀನ್ ಬೆಂಜನಪದವು ಹೇಳಿಕೆ
- ಯುವವಾಹಿನಿ ಆಟಿಡೊಂಜಿ ದಿನ
ವಿಟ್ಲ: ಹಳ್ಳಿಗಳ ಸೊಗಡು, ಆಚರಣೆ, ಧಾರ್ಮಿಕ ನಂಬಿಕೆ, ಆಹಾರ ಪದ್ಧತಿ ಹೀಗೆ ಒಟ್ಟು ಜನಜೀವನದ ಚಿತ್ರಣಗಳನ್ನು ಆಟಿ ತಿಂಗಳ ಆಚರಣೆ ನೆನಪಿಸುತ್ತದೆ. ಮಕ್ಕಳಿಗೆ ಸಂಸ್ಕಾರ ಕೊಡುವ ಕಾರ್ಯ ಮನೆಯ ಹಿರಿಯರಿಂದ ನಡೆಯಬೇಕು ಎಂದು ಬಂಟ್ವಾಳ ಉಪತಹಸೀಲ್ದಾರ್ ನವೀನ್ ಬೆಂಜನಪದವು ಹೇಳಿದರು.
ಪೊನ್ನೊಟ್ಟು ಶಿವಗಿರಿ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಬಿಲ್ಲವ ಸಂಘ ವಿಟ್ಲ, ಮಹಿಳಾ ಘಟಕ ಮತ್ತು ಯುವವಾಹಿನಿ ವಿಟ್ಲ ಆಶ್ರಯದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಯುವವಾಹಿನಿ ಕೇಂದ್ರ ಸಮಿತಿಯ ಮಹಿಳಾ ಘಟಕದ ಪೂರ್ವಾಧ್ಯಕ್ಷೆ ಶುಭಾ ರಾಜೇಂದ್ರ ಮಾತನಾಡಿ, ಮಾತೆಯರ ಮೂಲಕ ಆಚರಣೆಗಳು ಉಳಿದಾಗ ಮುಂದಿನ ಜನಾಂಗಕ್ಕೆ ಕೊಡುಗೆಯಾಗಬಲ್ಲದು ಎಂದರು.
ಮಹಿಳಾ ಘಟಕದ ಅಧ್ಯಕ್ಷೆ ವನಿತಾ ಚಂದ್ರಹಾಸ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಬಿಲ್ಲವ ಸಂಘದ ಅಧ್ಯಕ್ಷ ಜಯಪ್ರಕಾಶ್ ಪಾಣೆಮಜಲು, ವಿಟ್ಲ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜರಿ ನಿಡ್ಯ, ಯುವವಾಹಿನಿ ವಿಟ್ಲ ಅಧ್ಯಕ್ಷ ಆನಂದ ಕೆ.ಟಿ, ಸಂಜೀವ ಪೂಜಾರಿ, ಮಹಿಳಾ ಘಟಕದ ಗೌರವಾಧ್ಯಕ್ಷೆ ಸರಿತಾ ರೂಪರಾಜ್ ಉಪಸ್ಥಿತರಿದ್ದರು.
ಮಹಿಳಾ ಘಟಕದ ಕಾರ್ಯದರ್ಶಿ ಕವಿತಾ ಪರಮೇಶ್ವರ್ ವಂದಿಸಿದರು. ಧನಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.