ಉಳಿಯತ್ತಾಯ ವಿಷ್ಣು ಆಸ್ರ ನೇತೃತ್ವದಲ್ಲಿ ಪಂಚಾಮೃತಾಭಿಷೇಕ ನೆರವೇರಿತು. 
ಜಿಲ್ಲೆ

ಶ್ರೀ ಗುರುರಾಘವೇಂದ್ರ ಸಾರ್ವಭೌಮರ ಪುಣ್ಯತಿಥಿ : ಆರಾಧನಾ ಮಹೋತ್ಸವ

ಸೌಮ್ಯ ಆರ್

ಕಾಸರಗೋಡು: ನಗರದ ಎಸ್.ವಿ.ಟಿ ರಸ್ತೆಯ, ಶ್ರೀ ಪೇಟೆ ವೆಂಕಟ್ರಮಣ ದೇವಸ್ಥಾನ ಹಾಗೂ ಶ್ರೀ ಗುರುರಾಘವೇಂದ್ರ ಸ್ವಾಮಿ ವೃಂದಾವನ ಸೇವಾ ಸಮಿತಿ ವತಿಯಿಂದ, ಶ್ರೀ ಗುರುರಾಘವೇಂದ್ರ ಸಾರ್ವಭೌಮರ ಪುಣ್ಯತಿಥಿ, ಆರಾಧನಾ ಮಹೋತ್ಸವ ಜರುಗಿತು. ಉಳಿಯತ್ತಾಯ ವಿಷ್ಣು ಆಸ್ರ ನೇತೃತ್ವ ವಹಿಸಿದ್ದರು. ಕೆ.ಎನ್.ವೆಂಕಟ್ರಮಣ ಹೊಳ್ಳ, ಕೆ.ಎನ್.ರಾಮಕೃಷ್ಣ ಹೊಳ್ಳ, ಕೆ.ವಿ.ಶ್ರೀನಿವಾಸ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.

ಬೆಳಗ್ಗೆ ಗಣಪತಿ ಹವನ, ಪಂಚಾಮೃತಾಬಿಷೇಕ ಹಾಗೂ ವಿವಿಧ ಸೇವೆಗಳು, ಭಜನೆ, ವಿದುಷಿ ಮಂಜುಳಾ ಮೃಣಾಳಿನಿ ಮತ್ತು ವಿದ್ವಾನ್ ಎಲ್.ಅನಂತಪದ್ಮನಾಭ ಅವರಿಂದ ದ್ವಂದ್ವ ಪಿಟೀಲು ವಾದನ, ಮಧೂರು ಉಳಿಯ ಶ್ರೀ ಧನ್ವಂತರೀ ಯಕ್ಷಗಾನ ಕಲಾಸಂಘದಿಂದ ಯಕ್ಷಗಾನ ತಾಳಮದ್ದಳೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ವೆಂಕಟ್ರಮಣ ದೇವರಿಗೆ ವಿಶೇಷ ಪೂಜೆ, ವಿಶೇಷ ಹೂವಿನ ಪೂಜೆ, ರಂಗಪೂಜೆ ನಡೆಯಿತು.