ಕ್ಪೊಪಳ ಎಡಿಸಿ ಸಾವಿತ್ರಿ ಕಡಿಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಗುರುವಾರ ಮನವಿ ಸಲ್ಲಿಸಿದರು. ಎಎಪಿ ಜಿಲ್ಲಾಧ್ಯಕ್ಷ ಹುಸೇನ್ ಸಾಬ್ ಗಂಗನಾಳ, ರಾಜ್ಯ ಜಂಟಿ ಕಾರ್ಯದರ್ಶಿ ಶರಣಪ್ಪ ಸಜ್ಜಿಹೊಲ, ಎಂ.ಕೆ. ಸಾಹೇಬ್, ರಮೇಶ್ ಕೋಟಿ ಇತರರಿದ್ದರು. 
ಜಿಲ್ಲೆ

ಸಿಎಂ ಬೊಮ್ಮಾಯಿಂದ ಅಧಿಕಾರ ದುರ್ಬಳಕೆ: ಕೊಪ್ಪಳದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಂದ ಪ್ರತಿಭಟನೆ

ಕೊಪ್ಪಳ: ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಪುತ್ರನ ಲಂಚದ ಪ್ರಕರಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಂದ ಅಧಿಕಾರ ದುರ್ಬಳಕೆ ಆಗಿದೆಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನಗರದ ಎಡಿಸಿ ಸಾವಿತ್ರಿ ಕಡಿಗೆ ಗುರುವಾರ ಮನವಿ ಸಲ್ಲಿಸಿದರು.


ಶಾಸಕರ ಪುತ್ರ ಪ್ರಶಾಂತ್ ಮಾಡಳ್ ಗುತ್ತಿಗೆದಾರನಿಂದ ಲಕ್ಷಾಂತರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ ಮಾಡಿದೆ. ಆದರೂ ಶಾಸಕ ವಿರೂಪಾಕ್ಷಪ್ಪ ಕಾನೂನು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ. ಜಾಮೀನು ಸಿಗುವವರೆಗೂ ಕಣ್ತಪ್ಪಿಸಿಕೊಳ್ಳುವುದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಕಾರಣ. ಇದು ಅಧಿಕಾರ ದುರ್ಬಳಕೆಯಾಗಿದೆ. ಕೂಡಲೇ ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


ನೈತಿಕ ಹೊಣೆ ಹೊತ್ತು ಸಿಎಂ ತಕ್ಷಣ ರಾಜೀನಾಮೆ ನೀಡಬೇಕು. ಶಾಸಕರಿಗೆ ನೀಡಿದ ಜಾಮೀನು ರದ್ದುಪಡಿಸಿ ಬಂಧಿಸಬೇಕು. ಪ್ರಕರಣದ ವಿಚಾರಣೆಯಲ್ಲಿ ಸರ್ಕಾರದ ಹಸ್ತಕ್ಷೇಪ ತಡೆಯಬೇಕೆಂದು ಒತ್ತಾಯಿಸಿದರು.


ಎಎಪಿ ಜಿಲ್ಲಾಧ್ಯಕ್ಷ ಹುಸೇನ್ ಸಾಬ್ ಗಂಗನಾಳ, ರಾಜ್ಯ ಜಂಟಿ ಕಾರ್ಯದರ್ಶಿ ಶರಣಪ್ಪ ಸಜ್ಜಿಹೊಲ, ಎಂ.ಕೆ. ಸಾಹೇಬ್, ರಮೇಶ್ ಕೋಟಿ, ಮುಖಂಡರಾದ ರಾಘವೇಂದ್ರ ಸಿದ್ದಿಕೇರಿ, ದೊಡ್ಡಬಸಪ್ಪ, ಕಾಸಿಂ, ಬೋಗೇಶ್ ಆನೆಗೊಂದಿ, ಶಾಂತಮ್ಮ, ವಾಸು ಕಲ್ಬುರ್ಗಿ, ರಮೇಶ್ ಹಟ್ಟಿ ಇತರರಿದ್ದರು.