ಹಾನಗಲ್ಲ: ನಿಮ್ಮ ಆಧಾರ್ ಕಾರ್ಡ್ ಅಪಡೇಟ್ ಮಾಡಬೇಕು ಎಂದು ಹೇಳಿ ಓಟಿಪಿ ಪಡೆದು ವ್ಯಕ್ತಿಯೊಬ್ಬರ ಖಾತೆಯಿಂದ 3.65 ಲಕ್ಷ ರೂ. ವರ್ಗಾವಣೆ ಮಾಡಿಕೊಂಡು ಮೋಸ ಎಸಗಿದ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಅಕ್ಕಿಆಲೂರ ಗ್ರಾಮದ ಬಸವಣ್ಣೇಪ್ಪ ಪರಮೇಶ್ವರ ಅಂಕಸಖಾನಿ ಎಂಬುವರಿಗೆ ಮೋಸ ಮಾಡಿರುವುದು.
ಇವರಿಗೆ ಪೋನ್ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಕೆನರಾ ಬ್ಯಾಂಕ್ ಹೆಡ್‌ಕ್ವಾಟರ್‌ನಿಂದ ಮಾತನಾಡುತ್ತಿದ್ದು, ನಿಮ್ಮ ಆಧಾರ್ ಕಾರ್ಡ್ ಅಪಡೇಟ್ ಮಾಡಬೇಕಿದೆ. ಆದ್ದರಿಂದ ಓಟಿಪಿ ಬರುತ್ತದೆ ಅದನ್ನು ಹೇಳಿ ಎಂದು ಬಸವಣ್ಣೆಪ್ಪ ಅವರ ಓಟಿಪಿ ಹೇಳುತ್ತಿದ್ದಂತೆ ಅವರ ಖಾತೆಯಿಂದ 3.65 ಹಣ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.