ಮೂಲ್ಕಿ: ರಾಷ್ಟ್ರೀಯತೆಯ ಗುರುತು ನೀಡುವ ಆಧಾರ್ ತಿದ್ದುಪಡಿ ಮತ್ತು ನೋಂದಣಿಯನ್ನು ಗ್ರಾಮೀಣ ಭಾಗದ ಜನತೆಯ ಬಳಿ ತಲುಪಿಸುವ ಯುವ ಸಂಘಟನೆಗಳ ಸೇವೆ ಶ್ಲಾಘನೀಯ ಎಂದು ರೋಟರಿ ಕ್ಲಬ್ ಬೈಕಂಪಾಡಿ ವಲಯ ಸೇನಾನಿ ಗಣೇಶ ಎಂ. ಹೇಳಿದರು.
ರೋಟರಿ ಕ್ಲಬ್ ಬೈಕಂಪಾಡಿ, ಪಡುಪಣಂಬೂರು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಆಧಾರ್ ಸೇವಾ ಕೇಂದ್ರ ಮಂಗಳೂರು ಸಹಯೋಗದಲ್ಲಿ ಫೇಮಸ್ ಯೂತ್ ಕ್ಲಬ್ ಮತ್ತು ಮಹಿಳಾ ಮಂಡಲ 10ನೇ ತೋಕೂರು, ಹಳೆಯಂಗಡಿ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿದ್ದ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ಉದ್ಘಾಟಿಸಿ ವಾತನಾಡಿದರು.
ಫೇಮಸ್ ಯೂತ್ ಕ್ಲಬ್ ಅಧ್ಯಕ್ಷ ಭಾಸ್ಕರ್ ಅಮೀನ್ ತೋಕೂರು ಅಧ್ಯಕ್ಷತೆ ವಹಿಸಿದ್ದರು. ಫೇಮಸ್ ಯೂತ್ ಕ್ಲಬ್‌ನ ಸಾವಾಜಿಕ ಕಳಕಳಿ ಗುರುತಿಸಿ ರೋಟರಿ ಕ್ಲಬ್ ಬೈಕಂಪಾಡಿ ವತಿಯಿಂದ ಸಂಸ್ಥೆಗೆ ನೂತನ ಇನ್ವರ್ಟರನ್ನು ರೋಟರಿ ಕ್ಲಬ್ ಬೈಕಂಪಾಡಿಯ ಅಧ್ಯಕ್ಷ ಹರೀಶ್ ಬಿ.ಶೆಟ್ಟಿ ಹಸ್ತಾಂತರಿಸಿದರು.
ರೋಟರಿ ಕ್ಲಬ್ ಬೈಕಂಪಾಡಿ ಅಧ್ಯಕ್ಷ ಹರೀಶ್ ಬಿ.ಶೆಟ್ಟಿ, ಫೇಮಸ್ ಯೂತ್ ಕ್ಲಬ್‌ನ ಮಹಿಳಾ ಮಂಡಲದ ಅಧ್ಯಕ್ಷೆ ಪ್ರೇಮಲತಾ ಯೋಗೀಶ್, ಮಂಗಳೂರು ಆಧಾರ್ ಸೇವಾ ಕೇಂದ್ರದ ರಂಜನಿ, ಅನ್ವಿತಾ ಮತ್ತು ಪ್ರವೀಣ್ ಉಪಸ್ಥಿತರಿದ್ದರು. ಯೂತ್ ಕ್ಲಬ್ ಕಾರ್ಯದರ್ಶಿ ಹಿಮಕರ್ ಕೋಟ್ಯಾನ್ ಸ್ವಾಗತಿಸಿದರು. ಮಹಮ್ಮದ್ ಶರೀಫ್ ನಿರೂಪಿಸಿದರು.