ಹುಬ್ಬಳ್ಳಿ: ಪಾಲಿಕೆ ಸದಸ್ಯನ ಪುತ್ರ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಮಂಗಳವಾರ ರಾತ್ರಿ ಗೋಪನಕೊಪ್ಪದ ಸಿದ್ದರಾಮೇಶ್ವರ ನಗರದಲ್ಲಿ ನಡೆದಿದೆ.
ವಾಹನ ನಿಲುಗಡೆ ವಿಷಯದಲ್ಲಿ ಉಂಟಾದ ಮಾತಿನ ಚಕಮಕಿ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯನ ಪುತ್ರ ಚಿದಾನಂದ ನರಗುಂದ ತನ್ನ 3-4 ಸ್ನೇಹಿತರ ಜತೆಗೂಡಿ ಅಕ್ಷಯ ವಡ್ಡರ ಎಂಬಾತನಿಗೆ ಇಟ್ಟಿಗೆಯಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಆತನ ಸ್ಥಿತಿ ಗಂಭೀರವಾಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಉತ್ತರ ವಿಭಾಗದ ಎಸಿಪಿ ಶಿವಪ್ರಕಾಶ್ ನಾಯ್ಕ ಕಿಮ್ಸ್ಗೆ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದುಕೊಂಡಿದ್ದಾರೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.