ಜಿಲ್ಲೆ

ಶರಾವತಿ ಸೇತುವೆ ಮೇಲೆ ಭೀಕರ ಅಪಘಾತ, ಬೈಕ್​ನಲ್ಲಿದ್ದ ಯುವತಿ ಸಾವು

ಹೊನ್ನಾವರ: ನಿರಂತರ ಅಪಘಾತ ನಡೆಯುವ ಅಪಾಯಕಾರಿ ಶರಾವತಿ ಸೇತುವೆ ಮತ್ತೊಂದು ಬಲಿ ಪಡೆದಿದೆ.

ಶರಾವತಿ ಸೇತುವೆಯ ಮೇಲೆ ಸೋಮವಾರ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್​ನಲ್ಲಿದ್ದ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಬೈಕ್ ಹಿಂಬದಿ ಕುಳಿತಿದ್ದ ಹಳದೀಪುರ ಮೂಲದ ಭವ್ಯಾ ಗೌಡ ಮೃತಪಟ್ಟ ಯುವತಿ. ಬೈಕ ಸವಾರ ಸುರೇಶ ಗೌಡ ಗಾಯಗೊಂಡಿದ್ದು ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತದ ತೀವ್ರತೆಗೆ ಬೈಕ್ ಹಾಗೂ ಕಾರಿನ ಮುಂಭಾಗ ಜಖಂಗೊಂಡಿದೆ. ಹೊನ್ನಾವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.