ಜಿಲ್ಲೆ

ಲಂಡನ್‌ನಿಂದ ಬಂದ ಯುವತಿ!


ಲಂಡನ್‌ನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಚೇತನಾ ಮಾಲಂಗಿ ರಜೆಗೆ ಮೈಸೂರಿಗೆ ಬಂದಿದ್ದ ವೇಳೆ ತಾಯಿ ಮಂಜುಳಾ ಸುರೇಶ್ ಅವರೊಂದಿಗೆ ನರಸಿಂಹರಾಜ ಕ್ಷೇತ್ರದ ರಾಘವೇಂದ್ರ ನಗರದ ಜೆಎಸ್‌ಎಸ್ ಶಾಲೆಯಲ್ಲಿ ಶುಕ್ರವಾರ ಮತದಾನ ಮಾಡಿದರು.


‘ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿರುವುದು ಸಂತಸ ತಂದಿದೆ. ಪ್ರತಿಯೊಬ್ಬರೂ ಮತದಾನ ಮಾಡಬೇಕು. ಈ ಮೂಲಕ ನಮ್ಮ ಹಕ್ಕನ್ನು ಚಲಾಯಿಸಬೇಕು’ ಎಂದು ಚೇತನಾ ಮಾಲಂಗಿ ತಿಳಿಸಿದರು.