ಬೆಂಗಳೂರು: ವೀಕೆಂಡ್ ಶಾಪಿಂಗ್ ಮಾಡಲೆಂದು ಬ್ರಿಗೇಡ್ ರಸ್ತೆಗೆ ಬಂದಿದ್ದ ಯುವಕ-ಯುವತಿ ಇಬ್ಬರೂ ಶಾಂಪಿಂಗ್ ಕಾಂಪ್ಲೆಕ್ಸ್ನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಯುವತಿ-ಯುವಕನ ಸ್ಥಿತಿ ಚಿಂತಾಜನಕವಾಗಿದ್ದು, ನಿಮ್ಹಾನ್ಸ್ಗೆ ರವಾನಿಸಲಾಗಿದೆ.
ಇಂತಹ ದುರ್ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಇವರನ್ನು ಕ್ರಿಸ್ ಮತ್ತು ಲಿಯಾ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಬ್ರಿಗೆಡ್ ರಸ್ತೆಯಲ್ಲಿರು ಫಿಪ್ತ್ ಅವೆನ್ಯೂ ಕಟ್ಟಡದಿಂದ ಸಾರ್ವಜನಿಕರ ಕಣ್ಣೆದುರೇ ಕೆಳಗೆ ಬಿದ್ದಿದ್ದಾರೆ. 60 ಅಡಿ ಮೇಲಿಂದ ಬಿದ್ದ ಯುವಕ-ಯುವತಿ ಗಂಭೀರಗಾಯಗೊಂಡಿದ್ದರು. ತಕ್ಷಣ ನಿಮ್ಹಾನ್ಸ್ ಕರೆದೊಯ್ಯಲಾಗಿದೆ. ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.