ಯಳಂದೂರು ತಾಲೂಕಿನ ವಡಗೆರೆ ಗ್ರಾಮದಲ್ಲಿ ಮರದ ಕೊಂಬೆ ಬಿದ್ದು ಗಾಯಗೊಂಡ ಸಿ. ಸಾಗರ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು. 
ಜಿಲ್ಲೆ

ಮರಬಿದ್ದು ಯುವಕನ ಕಾಲು ಮುರಿತ

ಯಳಂದೂರು: ತಾಲೂಕಿನ ವಡಗೆರೆ ಗ್ರಾಮದಲ್ಲಿ ಮಂಗಳವಾರ ಜೋರು ಗಾಳಿಗೆ ಆಲದ ಮರದ ಕೊಂಬೆ ಬಿದ್ದು ಯುವಕ ಗಾಯಗೊಂಡಿದ್ದಾನೆ.

ಗ್ರಾಮದ ಚಾಮೇಗೌಡರ ಪುತ್ರ ಸಿ.ಸಾಗರ್(21) ಗಾಯಗೊಂಡವ. ವಡಗೆರೆ ಗ್ರಾಮದ ಅಂಚಿನಲ್ಲಿರುವ ರಂಗನಕಟ್ಟೆ ಬಳಿ ಕುಳಿತಿದ್ದ ಸಂದರ್ಭದಲ್ಲಿ ಜೋರು ಗಾಳಿ ಬೀಸಿದೆ. ಇದರಿಂದ ಆಲದ ದೊಡ್ಡ ಕೊಂಬೆಯೊಂದು ಈತನ ಬಲ ಕಾಲಿನ ಮೇಲೆ ಬಿದ್ದಿದೆ. ಇದರ ರಭಸಕ್ಕೆ ಕಾಲಿನ ಮೂಳೆ ಮುರಿದಿದ್ದು ಗಂಭೀರವಾಗಿ ಗಾಯವಾಗಿದೆ. ಕೂಡಲೇ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಕಂದಾಯ ಇಲಾಖೆಗೆ ಸಂಬಂಧಿಕರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತಹಸೀಲ್ದಾರ್ ಬಸವರಾಜು ಮಾತನಾಡಿ, ಸಂಬಂಧಪಟ್ಟವರಿಂದ ಈ ಬಗ್ಗೆ ಮಾಹಿತಿ ಪಡೆದು ಈತನ ಚಿಕಿತ್ಸಾ ವೆಚ್ಚ ಭರಿಸುವುದಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.