ವಿಜಯಪುರದ ಎಸ್​.ಎಸ್​. ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು. ಡಾ. ಜಿ.ಡಿ. ಅಕಮಂಚಿ, ಕೆ.ಬಿ. ಪಾಟೀಲ, ಅಮರೇಶ ಸಾಲಕ್ಕಿ ಮತ್ತಿತರರಿದ್ದಾರೆ. 
ಜಿಲ್ಲೆ

ವೈಚಾರಿಕ ಜಾಗೃತಿ ಮೂಡಿಸಿದ ಯುವ ಪುರುಷ

ಗಿರೀಶ ಸಗರ

ವಿಜಯಪುರ: ಜನರಲ್ಲಿ ಮೂಢನಂಬಿಕೆಗಳು ಬೇರೂರಿದ್ದ ಸಂದರ್ಭದಲ್ಲಿ ಕನಕದಾಸರಂತಹ ಸಂತರು ಹುಟ್ಟಿ ಬಂದು ಅವರಲ್ಲಿ ವೈಚಾರಿಕ ಜಾಗೃತಿಯನ್ನು ಉಂಟು ಮಾಡಿದರು ಎಂದು ಪ್ರಾಚಾರ್ಯ ಡಾ. ಜಿ.ಡಿ. ಅಕಮಂಚಿ ಹೇಳಿದರು.

ನಗರದ ಎಸ್​.ಎಸ್​. ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಎಸ್​.ಎಸ್​. ಪದವಿ ಪೂರ್ವ ಕಾಲೇಜು ಹಾಗೂ ಎಸ್​.ಎಸ್​. ಮಾಧ್ಯಮಿಕ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದಾಸ ಶ್ರೇಷ್ಠ ಕನಕದಾಸರ ಜಯಂತಿಯಲ್ಲಿ ಮಾತನಾಡಿದ ಅವರು, ಕನಕದಾಸರು ತೀರ ಸಾಮಾನ್ಯ ಸಂಗತಿಗಳನ್ನು ಆಧ್ಯಾತ್ಮಿಕ ಪರಿಭಾಷೆಯಾಗಿ ಪರಿವರ್ತಿಸುವ ಮೂಲಕ ಜನಭಾಷೆ ಮತ್ತು ಸಂಸತಿಗೆ ಒಂದು ಮಹತ್ವ ತಂದುಕೊಟ್ಟರು ಎಂದರು.

ಉಪ ಪ್ರಾಚಾರ್ಯ ಕೆ.ಬಿ. ಪಾಟೀಲ ಮಾತನಾಡಿ, ನಾವು ಕನಕದಾಸರ ಕೀರ್ತನಗಳ ಅಧ್ಯಯನ ನಡೆಸಿ ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದರು.

ಕನಕದಾಸರ ಜಯಂತಿ ವಿದ್ಯಾರ್ಥಿಗಳು ಭಾಷಣ ಮಾಡಿದರು. ಉಪನ್ಯಾಸಕ ಅಮರೇಶ ಸಾಲಕ್ಕಿ ಸ್ವಾಗತಿಸಿದರು ಶಿಕ್ಷಕ ಕೆ.ವಿ. ಒಡೆಯರ ನಿರೂಪಿಸಿದರು. ಡಿ.ಕೆ. ರಾಠೋಡ್​ ವಂದಿಸಿದರು.