RAICHUR 
ಜಿಲ್ಲೆ

ಆಂಜನೇಯ ಹಾಗೂ ರಾಯರ ದರ್ಶನ ಪಡೆದ ಯುವ

 ರಾಯಚೂರು ಎಕ್ಕ ಸಿನೆಮಾ ಬಿಡುಗಡೆಗೆ ದಿನಗಣನೆ ಹಿನ್ನೆಲೆ ಚಿತ್ರನಟ ಯುವ ರಾಜಕುಮಾರ್ ಭಾನುವಾರ ಮಂತ್ರಾಲಯದ ರಾಯಯ ದರ್ಶನ ಹಾಗೂ ನಗರದ ಹನುಮಾನ್ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎಕ್ಕಾ ಸಿನಿಮಾ ಪ್ರಾರಂಭಕ್ಕೂ ಮುನ್ನ ಮಂತ್ರಾಲಯದ ರಾಯರ ಸನ್ನಿಧಾನದಲ್ಲಿ ಕಥೆಗೆ ಪೂಜೆ ಮಾಡಿಸಲಾಗಿತ್ತು. ನಾನು ಯಾವುದೇ ಹೊಸ ಸಿನಿಮಾ ಪ್ರಾರಂಭಕ್ಕೂ ಮುನ್ನ ರಾಯರ ದರ್ಶನ ಪಡೆಯುತ್ತೇನೆ. ಅದೇ ನಮಗೆ ದೊಡ್ಡ ಧೈರ್ಯ. ಆದರಂತೆ ಆಂಜನೇಯ ಸ್ವಾಮಿ ದರ್ಶನ ಪಡೆದೆ ಎಂದರು.

ಮನುಷ್ಯನಲ್ಲಿ ಒಳ್ಳೆತನ ಕಾಪಾಡಿಕೊಳ್ಳಬೇಕು ಎನ್ನುವುದನ್ನು ಎಕ್ಕ ಸಿನೆಮಾ ಸಂದೇಶ ನೀಡಲಿದೆ. ಜಾಕಿ ಸಿನಿಮಾದ ಪ್ರೇರಣೆಯಾಗಿ ಈ ಸಿನಿಮಾವನ್ನು ಮಾಡಿದ್ದೇನೆ. ಬ್ಯಾಂಗಲ್ ಬಂಗಾರಿ ಹಾಡು ಹಿಟ್ ಆಗಿದೆ ದೇವರ ಆಶಿರ್ವಾದ ಎಂದರು.

ನಂತರ ದೇವಸ್ಥಾನದಲ್ಲಿ ನಟ ಯುವ ಜೊತೆ ಸೆಲ್ಫಿ ತೆಗೆದುಕೊಳ್ಳೋಕೆ ಅಭಿಮಾನಿಗಳು ಮುಗಿಬಿದ್ದು ನೂಕುನುಗ್ಗಲು ಮಾಡಿದರು.