ಜಿಲ್ಲೆ

ತುಳುನಾಡಿನ ಸಂಪ್ರದಾಯದಂತೆ ಮಂಗಳೂರು ಯುವಕನಿಗೂ ಬ್ರೆಜಿಲ್​ ಯುವತಿಗೂ ಮದುವೆ

ಮಂಗಳೂರು: ನಗರದ ಕರಂಗಲ್ಪಾಡಿ ನಿವಾಸಿ ಆದಿತ್ಯ, ಬ್ರೆಜಿಲ್ ಪ್ರಜೆ ತಾಟಿಯಾನೆಯರನ್ನು ಮದುವೆಯಾಗಿದ್ದಾರೆ. ಈ ಮದುವೆ ಕುರಿತಾದ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿವೆ.

ಆದಿತ್ಯ 8 ವರ್ಷಗಳ ಹಿಂದೆ ಐಟಿ ಉದ್ಯೋಗಕ್ಕಾಗಿ ಬ್ರೆಜಿಲ್​ಗೆ ತೆರಳಿದ್ದನು. ಬ್ರೆಜಿಲ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರ ಮಧ್ಯೆ ಪ್ರೀತಿ ಹುಟ್ಟಿದೆ.  ಇಬ್ಬರು ಪ್ರೀತಿಸುತ್ತಿರುವ ವಿಷ ಯವನ್ನು  ಪಾಲಕರಿಗೆ ತಿಳಿಸಿದ್ದರು. ಪೋಷಕರನ್ನು ಮದುವೆಗೆ ಒಪ್ಪಿಸಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

ಮಂಗಳೂರಿನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ತುಳುನಾಡಿನ ಸಂಪ್ರದಾಯದಂತೆ ಆದಿತ್ಯ ಮತ್ತು ತಾಟಿಯಾನೆ ಅದ್ದೂರಿಯಾಗಿ ವಿವಾಹವಾದರು. ಎರಡೂ ಕುಟುಂಬದ ಸದಸ್ಯರ ಸಮಕ್ಷಮದಲ್ಲಿ ಅಗ್ನಿ ಸಾಕ್ಷಿಯಾಗಿ ನವದಾಂಪತ್ಯಕೆ ಕಾಲಿಟ್ಟಿದ್ದಾರೆ.

ಪ್ರೀತಿ, ಪ್ರೇಮಕ್ಕೆ ದೇಶ, ಭಾಷೆ, ಜಾತಿ ಹೀಗೆ ಯಾವುದೇ ಅಡ್ಡಿ ಇಲ್ಲವೆಂದು ಈ ಜೋಡಿ ಸಾಬೀತು ಮಾಡಿದ್ದಾರೆ. ಬ್ರೆಜಿಲ್​​ ಯುವತಿ ತುಳುನಾಡಿನ ಸಂಪ್ರದಾಯ ಪ್ರಕಾರವೇ ಮದುವೆ ಆಗಿ ಹೊಸ ಜೀವನ ಆರಂಭಿಸಿದ್ದಾರೆ.