ಜಿಲ್ಲೆ

ಎಮ್ಮೆಗೆ ನೀರು ಕುಡಿಸಲು ಹೋಗಿದ್ದ ಯುವಕ ಧರ್ಮಾ ನದಿಯಲ್ಲಿ ಮುಳುಗಿ ಸಾವು

ಹಾನಗಲ್ಲ: ದನಕ್ಕೆ ನೀರು ಕುಡಿಸಲು ತೆರಳಿದ್ದ ಯುವಕ ಧರ್ವ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಹೊಂಬಳಿ ಗ್ರಾಮದಲ್ಲಿ ಭಾನುವಾರ ಸಂಜೆ ಸಂಭವಿಸಿದೆ.

ಗ್ರಾಮದ ಯಮನಪ್ಪ ಧರ್ಮಣ್ಣ ಬಂಡಿವಡ್ಡರ (24) ಮೃತ ದುರ್ದೈವಿ. ಈತ ಧರ್ವ ನದಿಪಾತ್ರದಲ್ಲಿ ಎಮ್ಮೆಗಳಿಗೆ ನೀರು ಕುಡಿಸಲು ತೆರಳಿದ್ದಾಗ ನೀರಲ್ಲಿ ಬಿದ್ದು ಮುಳುಗಿ ಮೃತಪಟ್ಟಿದ್ದಾನೆ. ಈ ಕುರಿತು ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.