ಜಿಲ್ಲೆ

ನೀರಿನ ಕಟ್ಟೆಯಲ್ಲಿ ಜಾರಿ ಬಿದ್ದು ಯುವಕ ಸಾವು

ಬ್ಯಾಡಗಿ: ನೀರಿನ ಕಟ್ಟೆಯಲ್ಲಿ ಕಾಲು ಜಾರಿ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.


ಮುನ್ನಾ ಸೈದುಸಾಬ ಬೇಪಾರಿ (22) ಮೃತ ಯುವಕ.


ಈತ ಪಟ್ಟಣದ ಬೆಟ್ಟದ ಮಲ್ಲೇಶ್ವರ ನಗರ ನಿವಾಸಿಯಾಗಿದ್ದು, ಗೌಂಡಿ ಕೆಲಸ ಮಾಡುತ್ತಿದ್ದ, ಶುಕ್ರವಾರ ಸಂಜೆ ಬಹಿರ್ದೆಸೆಗೆ ತೆರಳಿದ ವೇಳೆ ಕಾಲು ಜಾರಿ ನೀರಿನ ಕಟ್ಟೆಯಲ್ಲಿ ಬಿದ್ದು ಮೃತಪಟ್ಟ ವರದಿಯಾಗಿದೆ.


ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.