ಜಿಲ್ಲೆ

ಅತಿಯಾಗಿ ಮದ್ಯ ಸೇವಿಸಿ ಯುವಕ ಸಾವು

ನಾಗೇಶ ಎಸ್

ಹನಗೋಡು: ಅತಿಯಾದ ಮದ್ಯ ಸೇವನೆಯಿಂದ ಸೋಮವಾರ ಆದಿವಾಸಿ ಯುವಕ ಮೃತಪಟ್ಟಿದ್ದಾನೆ.

ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಬಲ್ಲೇನಹಳ್ಳಿ ಗಿರಿಜನ ಹಾಡಿಯ ನಿವಾಸಿ ಮಾದೇವ (28) ಮೃತ. ಈತ ಚಿಕ್ಕ ವಯಸ್ಸಿನಲ್ಲೇ ಕುಡಿತದ ಚಟಕ್ಕೆ ದಾಸನಾಗಿದ್ದು, ನಿತ್ಯ ಕೂಲಿಯಿಂದ ಬಂದ ಹಣವನ್ನು ಪೂರ್ತಿ ಕುಡಿತಕ್ಕೆ ವ್ಯಯ ಮಾಡುತ್ತಿದ್ದ. ಭಾನುವಾರ ದಿನವಿಡೀ ಕುಡಿತದ ಅಮಲಿನಲ್ಲಿಯೇ ಇದ್ದ. ಸೋಮವಾರ ಮುಂಜಾನೆ ಮಲಗಿದ್ದಲ್ಲೇ ಮೃತಪಟ್ಟಿದ್ದಾನೆ.

ಬಲ್ಲೇನಹಳ್ಳಿ ಗ್ರಾಮದ ಗಿರಿಜನ ಹಾಡಿ ಹಾಗೂ ಪರಿಶಿಷ್ಟ ಕಾಲನಿ ಸೇರಿದಂತೆ ಹಲವೆಡೆ ಅಕ್ರಮವಾಗಿ ಮದ್ಯ ಮಾರುತ್ತಿದ್ದು, ಎಲ್ಲ ಸಮಯದಲ್ಲೂ ಮದ್ಯ ಸಿಗುತ್ತಿರುವುದರಿಂದ ಕೂಲಿಕಾರ್ಮಿಕರು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಅಬಕಾರಿ ಹಾಗೂ ಪೊಲೀಸ್ ಇಲಾಖೆ ಅಕ್ರಮ ಮದ್ಯ ಮಾರಾಟ ತಡೆಯಬೇಕೆಂದು ಮೈಸೂರು ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್ ಆಗ್ರಹಿಸಿದ್ದಾರೆ.