ರಮೇಶ್ 
ಜಿಲ್ಲೆ

ಕಿಟಕಿಗೆ ನೇಣು ಬಿಗಿದು ಯುವಕ ಆತ್ಮಹತ್ಯೆ: ವರ್ಷದ ಹಿಂದೆ ಸಹೋದರನೂ ಸಾವು

Vinod Kumar

ಬಂಟ್ವಾಳ: ಯುವಕನೋರ್ವ ಮನೆಯ ಕಿಟಕಿಯ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನರಿಕೊಂಬು ಎಂಬಲ್ಲಿ ನಡೆದಿದೆ. ಇಲ್ಲಿನ ಶೇಖರ ಪೂಜಾರಿ ಅವರ ಎರಡನೇ ಮಗ ರಮೇಶ್(22) ಆತ್ಮಹತ್ಯೆ ಮಾಡಿಕೊಂಡ ಯುವಕ.

ವಿಷ ಪದಾರ್ಥ ಸೇವಿಸಿದ ಬಳಿಕ ನೇಣಿಗೆ ಶರಣು

ವಿಷ ಪದಾರ್ಥ ಸೇವಿಸಿ ಬಳಿಕ ಕಿಟಕಿಗೆ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಸೌಮ್ಯ ಸ್ವಭಾವದ ಶ್ರಮ ಜೀವಿಯಾಗಿದ್ದ ಈತ ಇಲ್ಲಿನ ಸ್ಥಳೀಯ ದಿನಸಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.

ವರ್ಷದ ಹಿಂದೆ ಸಹೋದರನೂ ಸಾವು

ಈತನ ಸಹೋದರ ಕಳೆದ ವರ್ಷ ಇವರ ಹಳೇ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಶೇಖರ ಪೂಜಾರಿ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಇಬ್ಬರೂ ಆತ್ಮಹತ್ಯೆ ಮೂಲಕ ಜೀವ ಕಳೆದುಕೊಂಡಿದ್ದಾರೆ. ಬಂಟ್ವಾಳ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.