ಜಿಲ್ಲೆ

ಹಾವು ಕಚ್ಚಿ ಯುವ ರೈತ ಸಾವು

Davangere - Desk - Ganesh M K

ಮಾಯಕೊಂಡ: ಸಮೀಪದ ಎಚ್. ಬಸವಾಪುರ ಗ್ರಾಮದ ಯುವ ರೈತ ಬಿ.ಕೆ. ಗಿರೀಶ್ (44) ಶುಕ್ರವಾರ ಮಧ್ಯಾಹ್ನ ಹೊಲದಲ್ಲಿ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ.

ಎಂದಿನಂತೆ ಹಸುಗಳನ್ನು ಮೇಯಿಸಲು ಹೊಲಕ್ಕೆ ಹೋದಾಗ ಗಿರೀಶ್‌ಗೆ ಹಾವು ಕಚ್ಚಿದೆ. ತಕ್ಷಣ ಜತೆಗಿದ್ದ ಸಹೋದರರು ದಾವಣಗೆರೆ ಸಿಜಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ, ಅಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಹೆಂಡತಿ, ಒಬ್ಬ ಪುತ್ರಿ, ಒಬ್ಬ ಪುತ್ರ ಇದ್ದಾರೆ. ಶನಿವಾರ ಮಧ್ಯಾಹ್ನ ಸ್ವಗ್ರಾಮದ ಹೊಲದಲ್ಲಿ ಅಂತ್ಯಸಂಸ್ಕಾರ ನಡೆಯಿತು.