ಜಿಲ್ಲೆ

ದೇಗುಲದಲ್ಲಿ ಇದೆಲ್ಲಾ ಬೇಕಿತ್ತಾ? ಯುವತಿಯರಿಬ್ಬರ ಜತೆ ಯುವಕನ ವಿಡಿಯೋ ವೈರಲ್​!

ಮಂಗಳೂರು: ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಆವರಣದಲ್ಲಿ ಯುವತಿಯರ ಜತೆ ಯುವಕನೊಬ್ಬ ರೀಲ್ಸ್​ ವಿಡಿಯೋ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೇಗುಲ ಆವರಣದಲ್ಲಿ ಅಸಭ್ಯವಾಗಿ ವರ್ತಿಸಿ ವಿಡಿಯೋ ಮಾಡಿದ ಬಗ್ಗೆ ದೇವಸ್ಥಾನದ ಭಕ್ತವೃಂದ ತೀವ್ರವಾಗಿ ಖಂಡಿಸಿದೆ.

ದೇವಳದಲ್ಲಿ ಅರ್ಚಕರು ಪೂಜೆ ಮಾಡಿ ಹೋದ ಬಳಿಕ ಪ್ರತೀಕ್‌ ಶೆಟ್ಟಿ ಎಂಬ ಯುವಕ ಇಬ್ಬರು ಹುಡುಗಿಯರೊಂದಿಗೆ ದೇವಸ್ಥಾನದ ಆವರಣದಲ್ಲಿ ಪ್ರೀತಿ-ಪ್ರೇಮ ನಿವೇದನೆ ಕಾನ್ಸೆಪ್ಟ್​ ಕುರಿತ ವಿಡಿಯೋ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದ. ಇದರಿಂದಾಗಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಿದೆ ಎಂದು ಆ ಮೂವರ ವಿರುದ್ಧ ಆಕ್ರೋಶ ಹೊರಹಾಕಿರುವ ಭಕ್ತರು ಮತ್ತು ಗ್ರಾಮಸ್ಥರು, ಇದರಲ್ಲಿ ಭಾಗಿಯಾದವರೆಲ್ಲರೂ ದೇವಸ್ಥಾನಕ್ಕೆ ಬಂದು ಕ್ಷಮೆಯಾಚಿಸಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ. ಕ್ಷಮೆಯಾಚಿಸದಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.