ಜಿಲ್ಲೆ

ಡಾಬಾದಲ್ಲಿ ಕೆಲಸ ಮಾಡುತ್ತಿದ್ದವ ಆತ್ಮಹತ್ಯೆ

ರೇಷ್ಮೆ ನಗರ ಡೆಸ್ಕ್

ಕನಕಪುರ: ತಾಲೂಕಿನ ಸಾತನೂತು ಡಾಬಾದಲ್ಲಿ ಕೆಲಸ ಮಾಡುತ್ತಿದ್ದವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಳೆದ 5 ವರ್ಷಗಳಿಂದ ಸಾತನೂರಿನಲ್ಲಿ ವಾಸವಿದ್ದ ಅಶೋಕ್​(40) ಆತ್ಮಹತ್ಯೆ ಮಾಡಿಕೊಂಡವ. ಅಶೋಕನ ಮೂಲ ವಿಳಾಸ ಹಾಗೂ ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತ ದೇಹವನ್ನು ದಯಾನಂದ ಸಾಗರ್​ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದು, ವಾರಸುದಾರರಿದ್ದಲ್ಲಿ ಸಾತನೂರು ಠಾಣೆ ಇಲ್ಲವೆ ದೂರವಾಣಿ ಸಂಖ್ಯೆ 94808&02863 ಸಂಪರ್ಕಿಸಬಹುದು.