ಜಿಲ್ಲೆ

ಮಕ್ಕಳ ಸುಂದರ ಬದುಕಿಗೆ ಬಣ್ಣ ತುಂಬುವ ಕೃತಿ

ಧಾರವಾಡ: ‘ಮಂತ್ರದ ಕಲ್ಲುಗಳು’ ಎಂಬ ಕಥಾ ಸಂಕಲನವು ಮಕ್ಕಳ ಭಾವನೆಗಳನ್ನು ಅರಳಿಸಿ ಕುತೂಹಲ ಕೆರಳಿಸುವಂತಿದೆ. ಮಕ್ಕಳ ಮನಸ್ಸಿಗೆ ರಂಜನೆ ನೀಡಿ, ಬುದ್ಧಿಗೆ ಸಂಸ್ಕಾರ, ವಿವೇಕ ನೀಡುವ ಮೌಲಿಕ ಕೃತಿಯಾಗಿದೆ ಎಂದು ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ.ವೀರಣ್ಣ ರಾಜೂರ ಅಭಿಪ್ರಾಯಪಟ್ಟರು.

ನಗರದ ಕವಿವ ಸಂಘದಲ್ಲಿ ಚಿಲಿಪಿಲಿ ಪ್ರಕಾಶನ ಧಾರವಾಡ ಹಾಗೂ ಅಕ್ಷರ ೌಂಡೇಷನ್ ಬೆಂಗಳೂರ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕೆ.ಎಚ್.ನಾಯಕ ರಚಿಸಿದ ‘ಮಂತ್ರದ ಕಲ್ಲುಗಳು’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ದುರ್ಗ ಸಿಂಹನ ಪಂಚತಂತ್ರ, ಇಸೋಪನ ನೀತಿ ಕಥೆಗಳು ಮಕ್ಕಳಲ್ಲಿ ವೈಚಾರಿಕ ಹಾಗೂ ನೈತಿಕ ಪ್ರಜ್ಞೆ ಬೆಳೆಸುವಲ್ಲಿ ಸಹಕಾರಿಯಾಗಿವೆ. ಕೆ.ಎಚ್.ನಾಯಕರ ಈ ಕೃತಿ ಒಟ್ಟು 17 ಮಕ್ಕಳ ಕಥೆಗಳನ್ನಾಧರಿಸಿದ್ದು, ಎಲ್ಲವೂ ವಿಭಿನ್ನ ಶೈಲಿ ಹೊಂದಿವೆ. ಈ ಕಥೆಗಳು ಮಕ್ಕಳ ಸುಂದರ ಬದುಕಿಗೆ ಬಣ್ಣ ತುಂಬುವಂತವುಗಳಾಗಿವೆ ಎಂದರು.

ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಚಿಕ್ಕಮಠ ಕೃತಿ ಪರಿಚಯಿಸಿದರು. ಲೇಖಕ ಕೆ.ಎಚ್.ನಾಯಕ ಮಾತನಾಡಿದರು.

ಅಕ್ಷರ ೌಂಡೇಷನ್ ಟ್ರಸ್ಟಿ ಮಂಜುನಾಥ ನಾಯಕ, ಚಿಲಿಪಿಲಿ ಪ್ರಕಾಶನದ ಸಂಪಾದಕ ಶಂಕರ ಹಲಗತ್ತಿ ಮಾತನಾಡಿದರು. ಕಲಾವಿದರಾದ ಬಿ. ಮಾರುತಿ ಮತ್ತು ಡಾ. ಬಸವರಾಜ ಕಲೇಗಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೆಂಕಟೇಶ ಮಾಚಕನೂರ, ಬಿ.ಡಿ. ಪಾಟೀಲ, ಜಗದೀಶ ಬರದೇಲಿ, ಬಸವರಾಜ ಕಪಲಿ, ನಾಗರಾಜ ಗುರಿಕಾರ, ಡಾ.ವಿಲಾಸ ಕುಲಕರ್ಣಿ ಇತರರಿದ್ದರು.

ವೀರಣ್ಣ ಒಡ್ಡೀನ ಸ್ವಾಗತಿಸಿದರು. ವಿ.ಎನ್. ಕೀರ್ತಿವತಿ ನಿರೂಪಿಸಿದರು. ಅಕ್ಷರ ೌಂಡೇಷನ್ ಕಾರ್ಯದರ್ಶಿ ಸಿ.ಟಿ. ನಾಯಕ ವಂದಿಸಿದರು.