- ಚಾಮರಾಜನಗರ : ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರ-ಲಿಂಗಣಾಪುರದ ರಸ್ತೆಯಲ್ಲಿ ಭಾನುವಾರ ಸಂಜೆ ಬೈಕ್‌ನಲ್ಲಿ ಬಂದ ಸರಗಳ್ಳನೊಬ್ಬ ಮಹಿಳೆಯ ಮಾಂಗಲ್ಯಸರ ಕಸಿದು ಪರಾರಿಯಾಗಿದ್ದಾನೆ.
ಪಟ್ಟಣದ ಆದರ್ಶನಗರ ಬಡಾವಣೆಯ ನಿವಾಸಿ ನಂಜಯ್ಯ ಅವರ ಪತ್ನಿ ಮಹದೇವಮ್ಮ 40 ಗ್ರಾಂ ತೂಕದ ಚಿನ್ನದ ಸರ ಕಳೆದುಕೊಂಡವರು.
ಈ ದಂಪತಿ ಕಾವೇರಿಪುರ ಸಮೀಪದ ಬನಶಂಕರಿ ದೇವಾಲಯಕ್ಕೆ ತೆರಳಿ ಸಿದ್ದಯ್ಯನಪುರ-ಲಿಂಗಣಾಪುರದ ರಸ್ತೆ ಮಾರ್ಗವಾಗಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಸರಗಳ್ಳ ಮಹದೇವಮ್ಮ ಅವರ ಕತ್ತಿನಲ್ಲಿದ್ದ ಸರ ಕಸಿದುಕೊಂಡು ಪರಾರಿಯಾಗಿದ್ದಾನೆ. ಗಾಬರಿಗೊಂಡ ದಂಪತಿ ತಕ್ಷಣ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
- ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಸೋಮೇಗೌಡ, ಸಿಪಿಐ ಕೃಷ್ಣಪ್ಪ, ಪಿಎಸ್‌ಐ ಮಹೇಶ್ ಕುಮಾರ್, ಕ್ರೈ ವಿಭಾಗದ ಪಿಎಎಸ್‌ಐ ಉಮಾವತಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.