ಶಿವಮೊಗ್ಗ ದೊಡ್ಡಪೇಟೆ ಠಾಣೆ 
ಜಿಲ್ಲೆ

ಸಿಟಿ ಬಸ್‌ನಲ್ಲಿ ಮಹಿಳೆಯ ಕಿವಿಯೋಲೆ ಕಳವು

ಶಿವಮೊಗ್ಗ: ನಗರದಲ್ಲಿ ಸಿಟಿ ಬಸ್‌ನಲ್ಲಿ ಪ್ರಯಾಣಿಸುವಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 23 ಸಾವಿರ ರೂ. ಮೌಲ್ಯದ ಬಂಗಾರದ ಕಿವಿಯೋಲೆ ಕಳವು ಮಾಡಲಾಗಿದೆ.

ಮಾರ್ಗರೇಟ್ ಎಂಬುವರು ನಗರದ ಶಿವಪ್ಪನಾಯಕ ಸರ್ಕಲ್ ಬಳಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ 3 ಗ್ರಾಂ ತೂಕದ ಕಿವಿಯೋಲೆ ಕಳ್ಳತನವಾಗಿದೆ. ಮಾರ್ಗರೇಟ್ ಅವರು ನೆಹರು ರಸ್ತೆಯ ಜ್ಯುವೆಲರಿ ಶಾಪ್‌ನಲ್ಲಿ ಕಿವಿಯೋಲೆ ಖರೀದಿಸಿದ್ದರು. ಶಿವಪ್ಪನಾಯಕ ವೃತ್ತದವರೆಗೆ ನಡೆದು ಬಂದು ಗೋಪಾಳಕ್ಕೆ ತೆರಳುವ ಸಿಟಿ ಬಸ್ ಹತ್ತಿದ್ದರು.
ಈ ವೇಳೆ ರಶ್ ಇದ್ದಿದ್ದರಿಂದ ಕಳ್ಳರು ಮಾರ್ಗರೇಟ್ ಅವರ ವ್ಯಾನಿಟಿ ಬ್ಯಾಗಿನ ಜಿಪ್ ತೆಗೆದು, ಕಿವಿಯೋಲೆ ಕಳ್ಳತನ ಮಾಡಿದ್ದಾರೆ. ಬಸ್ಸಿನಲ್ಲಿ ಟಿಕೆಟ್ ಹಣಕ್ಕಾಗಿ ವ್ಯಾನಿಟಿ ಬ್ಯಾಗ್ ತೆಗೆಯಲು ಮುಂದಾದಾಗ ಜಿಪ್ ತೆರೆದಿರುವುದು ಗೊತ್ತಾಗಿದೆ. ಪರಿಶೀಲಿಸಿದಾಗ ಕಿವಿಯೋಲೆ ಕಳ್ಳತನವಾಗಿರುವುದು ಗೊತ್ತಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.