ಬಹುಜನ ಸಮಾಜ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ 
ಜಿಲ್ಲೆ

ಅಪ್ಪ-ಮಕ್ಕಳ ಅಸಹ್ಯಕರ ಕೃತ್ಯದಿಂದ ಹೆಣ್ಣಿನ ಕುಲಕ್ಕೆ ಕಳಂಕ

ಚಿಕ್ಕಮಗಳೂರು: ಲೈಂಗಿಕ ಹಗರಣದಲ್ಲಿ ಭಾಗಿಯಾಗಿರುವ ಎಚ್.ಡಿ.ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಹುಜನ ಸಮಾಜ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಒತ್ತಾಯಿಸಿದ್ದಾರೆ.

ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು ಲೈಂಗಿಕ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಮಾಜಿ ಸಚಿವ ಎಚ್.ಡಿ.ರೇವಣ್ಣ ಮತ್ತು ಅವರ ಮಗ ಸಂಸದ ಪ್ರಜ್ವಲ್ ರೇವಣ್ಣ ಮೇಲೆ ಕೇಳಿ ಬರುತ್ತಿದೆ. ಈಗಾಗಲೇ ಎಸ್‌ಐಟಿ ತಂಡ ಪ್ರಕರಣ ದಾಖಲಿಸಿ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ರಾಜ್ಯ ಮತ್ತು ರಾಷ್ಟçವನ್ನು ಆಳುವ ಸ್ಥಾನದಲ್ಲಿರುವವರು ಮಾಡಿರುವ ಕೃತ್ಯ ಸಣ್ಣ ಮಟ್ಟದಲ್ಲ. ಅಲ್ಲದೇ ಅವರು ಕ್ಷಮೆಗೂ ಅರ್ಹರಲ್ಲ ಎಂದಿ ದೂರಿದ್ದಾರೆ.
ಮಾಜಿ ಪ್ರಧಾನಿ ಮಗ ಮತ್ತು ಮೊಮ್ಮಗ ಅಸಹ್ಯಕರವಾದ ಕೃತ್ಯವೆಸೆಗಿದ್ದು ಹೆಣ್ಣಿನ ಕುಲಕ್ಕೆ ಕಳಂಕ ತಂದಿದ್ದಾರೆ. ಕೇವಲ ಹಣ, ಅಧಿಕಾರ ಬಳಸಿಕೊಂಡು ಹೆಣ್ಣನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬೇಕೆಂಬ ಮನೋಭಾವ ಹೊಂದಿದ್ದಾರೆ. ಹೀನಾ ಕೃತ್ಯ ಎಸಗಿರುವ ಇವರನ್ನು ಎಸ್‌ಐಟಿ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.