ಜಿಲ್ಲೆ

ಮಹಿಳೆಗೆ 96 ಸಾವಿರ ರೂ. ಮೋಸ

ಮೈಸೂರು: ಸಾಲ ನೀಡುವುದಾಗಿ ಮಹಿಳೆಯೊಬ್ಬರಿಗೆ 96,900 ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ.


ಸರಸ್ವತಿಪುರಂನ ಪಿ.ಬಿ.ಭವ್ಯಾ ವಂಚನೆಗೆ ಒಳಗಾದವರು. ಪ್ರತಿಷ್ಠಿತ ಫೈನಾನ್ಸ್ ಹೆಸರು ಹೇಳಿಕೊಂಡು ಕರೆ ಮಾಡಿರುವ ವಂಚಕರು, ಲೋನ್ ನೀಡುವುದಾಗಿ ಆಸೆ ಹುಟ್ಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಿ.ಬಿ.ಭವ್ಯಾ ಅವರು ಆಧಾರ್ ಕಾರ್ಡ್, ಪ್ಯಾನ್‌ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ದಾಖಲೆಯನ್ನು ಮೊಬೈಲ್ ಮೂಲಕ ಕಳುಹಿಸಿಕೊಟ್ಟಿದ್ದಾರೆ.

ನಂತರ ಜಿಎಸ್‌ಟಿ ಮತ್ತು ಇತರ ಚಾರ್ಜಸ್ ಎಂದು ನಂಬಿಸಿ 96,900 ರೂ. ಆನ್‌ಲೈನ್ ಮೂಲಕ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ. ಇವರ ದೂರಿನ್ವಯ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.