ನರಗುಂದ: ಮೇವು ತರಲು ಹೋಗಿದ್ದ ಮಹಿಳೆಗೆ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಪಟ್ಟಣದ ದಂಡಾಪೂರ ಸವದತ್ತಿ ರಸ್ತೆಯ ರೋಖಡೆ ಶೆಡ್ ಬಳಿ ಶುಕ್ರವಾರ ನಡೆದಿದೆ.
ನಿಂಗವ್ವ ಭೀಮಪ್ಪ ಸುಬ್ರ (ಬಸಿಡೋಣಿ) (35) ಮೃತ ಮಹಿಳೆ.
ಕೃಷಿಕರಾಗಿದ್ದ ನಿಂಗವ್ವ ಶುಕ್ರವಾರ ಸಂಜೆ ಜಾನುವಾರುಗಳಿಗೆ ಹೊಟ್ಟು, ಮೇವು ತರಲು ಬಣವೆಗೆ ಹೋಗಿದ್ದರು. ಬರಿಗೈನಿಂದ ಹೊಟ್ಟು ಸಂಗ್ರಹಿಸುತ್ತಿದ್ದಾಗ ಎರಡು ಬಾರಿ ನಾಗರಹಾವು ಕಚ್ಚಿದೆ.
ಮನೆಯಲ್ಲಿ ಯಾರೂ ಇಲ್ಲದ್ದರಿಂದ ಅಕ್ಕಪಕ್ಕದ ಸಾರ್ವಜನಿಕರು, ಸಂಬಂಧಿಕರು ನರಗುಂದದ ಬಾಬಾಸಾಹೇಬ ಭಾವೆ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹುಬ್ಬಳ್ಳಿಯ ಕಿಮ್್ಸ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.