ಜಿಲ್ಲೆ

ಮಹಿಳೆ ಶಕ್ತಿಯ ಸಂಕೇತ ಪ್ರೇರಣೆಯ ಪ್ರತೀಕ

ಕುಂದಾಪುರ: ಮಹಿಳೆ ಶಕ್ತಿಯ ಸಂಕೇತ, ಪ್ರೇರಣೆಯ ಪ್ರತೀಕ, ಪ್ರೀತಿ ಸಹನೆ ಮತ್ತು ಧೃಡ ಸಂಕಲ್ಪದ ದೀಪ ಸ್ತಂಭ. ನಿಮ್ಮ ಕನಸುಗಳನ್ನು ಹಿಂಬಾಲಿಸಿ, ನಿಮ್ಮಲ್ಲಿರುವ ಪ್ರತಿಭೆ ಗುರುತಿಸಿಕೊಳ್ಳಿ ಎಂದು ಕುಂದಾಪುರ ವಲಯ ಪ್ರಧಾನ ಧರ್ಮಗುರು ಪೌಲ್ ರೇಗೊ ಹೇಳಿದರು.

ಕುಂದಾಪುರ-ಬೈಂದೂರು ತಾಲೂಕುಗಳ ಭಾವನ ಮಹಿಳಾ ಒಕ್ಕೂಟದಿಂದ ಕುಂದಾಪುರ ಸಂತ ಮೇರಿಸ್ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಕಂಡ್ಲೂರು ಕನ್ನಿಕಾ ಎಜುಕೇಶನ್ ಟ್ರಸ್ಟ್ ಅಧ್ಯಕ್ಷೆ ಗೌರಿ ಆರ್.ಶ್ರೀಯಾನ್, ಕುಂದಾಪುರ ಮತ್ತು ಬೈಂದೂರು ತಾಲೂಕು ಭಾವನ ಮಹಿಳಾ ಒಕ್ಕೂಟ ಆಧ್ಯಾತ್ಮಿಕ ನಿರ್ದೇಶಕ ವಿನ್ಸೆಂಟ್ ಕುವೆಲ್ಲೊ, ಸುಗಮ್ಯ ಉಡುಪಿ ಜಿಲ್ಲಾ ಒಕ್ಕೂಟ ಅಧ್ಯಕ್ಷೆ ಗ್ರೆಸಿ ಕುವೆಲ್ಲೊ, ಮಾನಿನಿ ರಾಜ್ಯ ಒಕ್ಕೂಟ ಅಧ್ಯಕ್ಷೆ ಜಾನೆಟ್ ಬಾರ್ಬೊಜಾ, ಸಂಪದ ಸಂಸ್ಥೆ ಸ್ಟಾೃನಿ ಫರ್ನಾಂಡಿಸ್ ಮಾತನಾಡಿದರು.

ಮಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯೆ ಜೂಡಿತ್ ಮೆಂಡೊನ್ಸಾ ಅವರನ್ನು ಸನ್ಮಾನಿಸಲಾಯಿತು. ಸುಗಮ್ಯ ಸೌರ್ಹಾದ ಸಹಕಾರಿ ಸ್ಥಾಪಕ ಅಧ್ಯಕ್ಷೆ ಪ್ರಮೀಳಾ ಡೆಸಾ, ಸುಗಮ್ಯ ಜಿಲ್ಲಾ ಒಕ್ಕೂಟ ಪತ್ರಿಕೆ ಸಂಪಾದಕಿ ಗ್ರೇಸಿ ಮಚಾದೊ, ಸಚೇತಕರಾದ ಸಿಂತಿಯಾ ರೊಡ್ರಿಗಸ್, ಜ್ಯೋತಿ ಡಿಸೋಜ ಉಪಸ್ಥಿತರಿದ್ದರು. ಭಾವನ ಮಹಿಳಾ ಒಕ್ಕೂಟ ಅಧ್ಯಕ್ಷೆ ಪ್ರೀತಿ ಫರ್ನಾಂಡಿಸ್ ಸ್ವಾಗತಿಸಿದರು. ಕಾರ್ಯದರ್ಶಿ ಎವ್ಲಿನ್ ಫರ್ನಾಂಡಿಸ್ ವರದಿ ವಾಚಿಸಿದರು. ಕೋಶಾಧಿಕಾರಿ ಟ್ರೀಜಾ ಸಿಕ್ವೇರಾ ಆಯವ್ಯಯ ಮಂಡಿಸಿದರು. ನಿರ್ಗಮನ ಅಧ್ಯಕ್ಷೆ ಶಾಲೆಟ್ ಡಿಸಿಲ್ವಾ ವಂದಿಸಿದರು. ಶಾಂತಿ ಆರ್.ಬರೆಟ್ಟೊ ಮತ್ತು ವಿನಯಾ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿದರು.