ಬಾಗಲಕೋಟೆ ಕಸಾಪ ಭವನದಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಕಾಶಿಬಾಯಿ ಬಿಲಕೇರಿ(ಕೃಷಿ), ಜ್ಯೋತಿ ಕಿರಣ ದಾಸ್ (ಮಹಿಳಾ ಸಂಘಟನೆ) ಹಾಗೂ ನಂದವ್ವ ಗದ್ದನಕೇರಿ(ಜಾನಪದ) ಅವರನ್ನು ಸನ್ಮಾನಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶಲ್ಲಿಕೇರಿ, ಸಾಹಿತಿ ಪ್ರಿಯಾ ಕಟ್ಟಿ ಚಿಂತಕಿ ಸುವರ್ಣ ಕೊಳಚಿ, ಕೆ.ಎಲ್. ಬಿಲಕೇರಿ, ಮಲ್ಲಿಕಾರ್ಜುನ ಹೆಗ್ಗಳಗಿ, ಆರ್.ಡಿ. ಹಳಂಗಳಿ, ಡಾ.ಎಸ್.ಬಿ. ಪಾಟೋಳ್ಳಿ ಇತರರಿದ್ದರು. 
ಜಿಲ್ಲೆ

ಮಹಿಳೆ ಅಬಲೆಯಲ್ಲ ಸಬಲೆ

ಬಾಗಲಕೋಟೆ: ಇಂದಿನ ತಂತ್ರಜ್ಞಾನ ಯುಗದಲ್ಲಿ ಮಹಿಳೆಯು ಕಾಲಕ್ಕೆ ತಕ್ಕಂತೆ ಬದಲಾವಣೆಯಾಗಿ ವಿಫುಲವಾಗಿರುವ ಅವಕಾಶಗಳನ್ನು ಪಡೆಯುತ್ತಾ ಸಬಲೆಯಾಗಿ ಬೆಳೆಯುತ್ತಿದ್ದಾಳೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಹಾಗೂ ತಾಲೂಕು ಘಟಕದಿಂದ ಶುಕ್ರವಾರ ಸಂಜೆ ಕಸಾಪ ಭವನದಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಲ್ಲ ಕ್ಷೇತ್ರದಲ್ಲಿ ಮಹಿಳೆಯು ಮುನ್ನುಗ್ಗುತ್ತಿದ್ದು, ಈ ಮೂಲಕ ನಾನು ಸಮರ್ಥವಾಗಿ ಇದ್ದೇನೆ ಎನ್ನುವ ಸಂದೇಶವನ್ನು ಸಮಾಜಕ್ಕೆ ಮಹಿಳೆಯರು ನೀಡುತ್ತಿದ್ದಾರೆ ಎಂದರು.

ಬಾಗಲಕೋಟೆ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಪಾರ್ವತಿ ಎಸ್. ಆಲೂರ ಮಾತನಾಡಿ, ಮಹಿಳೆಯರು ಸರ್ಕಾರದಿಂದ ಸಿಗುವ ಸೌಲಭ್ಯಗಳಗ ಸದುಪಯೋಗ ಪಡೆದುಕೊಳ್ಳಬೇಕು. ಉತ್ತಮವಾದ ಸಮಾಜ ಕಟ್ಟಲು ಮಹಿಳೆಯ ಪಾತ್ರ ಅತ್ಯಂತ ಹಿರಿದಾಗಿದೆ ಎಂದು ತಿಳಿಸಿದರು.

ಸಾಹಿತಿ ಪ್ರಿಯಾ ಕಟ್ಟಿ ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರದ ಸಾಧಕರಾದ ಕಾಶಿಬಾಯಿ ಬಿಲಕೇರಿ(ಕೃಷಿ), ಜ್ಯೋತಿ ಕಿರಣ ದಾಸ್ (ಮಹಿಳಾ ಸಂಘಟನೆ) ಹಾಗೂ ನಂದವ್ವ ಗದ್ದನಕೇರಿ(ಜಾನಪದ) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಹಿಳಾಪರ ಚಿಂತಕಿ ಸುವರ್ಣ ಕೊಳಚಿ, ಕೆ.ಎಲ್. ಬಿಲಕೇರಿ, ಮಲ್ಲಿಕಾರ್ಜುನ ಹೆಗ್ಗಳಗಿ, ಆರ್.ಡಿ. ಹಳಂಗಳಿ, ಡಾ.ಎಸ್.ಬಿ.ಪಾಟೋಳ್ಳಿ ಮತ್ತಿತರರಿದ್ದರು. ಪಾಂಡುರಂಗ ಸಣ್ಣಪ್ಪನವರ ಸ್ವಾಗತಿಸಿದರು. ಡಾ. ಉಮಾ ಅಕ್ಕಿ ಪರಿಚಯಿಸಿದರು. ಲಕ್ಕಮ್ಮದೇವಿ ಕೆಳಗಿನಗೌಡರ ನಿರೂಪಿಸಿದರು. ಎಸ್.ಎಸ್. ಗಾಣಗೇರ ವಂದಿಸಿದರು.