ಮುಧೋಳ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನೂತನ ಅಧ್ಯಕ್ಷರಾಗಿ ಲಲಿತಾ ಪ್ರಕಾಶ ಹೊಸಮನಿ ಅವರನ್ನು ಸಂಘದ ಪರ ಸನ್ಮಾನಿಸಲಾಯಿತು. ಪ್ರಧಾನ ಕಾರ್ಯದರ್ಶಿ ರಮೇಶ ಅರಕೇರಿ, ರಾಜೇಶ್ವರಿ ಕಂಕನೋಡಿ, ರೇಣುಕಾ ಬೆಳಗಲಿ, ಜ್ಯೋತಿ ಶೇಡಬಾಳ ಉಪಸ್ಥಿತರಿದ್ದರು. 
ಜಿಲ್ಲೆ

ಮಹಿಳೆಗೆ ಒಲಿದ ಅಧ್ಯಕ್ಷ ಸ್ಥಾನ

ಗಿರೀಶ ಸಗರ

ಮುಧೋಳ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಲಲಿತಾ ಪ್ರಕಾಶ ಹೊಸಮನಿ ಅವಿರೋಧ ಆಯ್ಕೆಯಾದರು.

ನಿಕಟಪೂರ್ವ ಅಧ್ಯಕ್ಷ ಪ್ರಕಾಶ ಬೆಳಗಲಿ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗುರುನಾಥ ಬೇವಿನಗಿಡದ ಸಮ್ಮುಖದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ಪ್ರಧಾನ ಕಾರ್ಯದರ್ಶಿ ರಮೇಶ ಅರಕೇರಿ, ಉಪಾಧ್ಯಕ್ಷ ಐ. ಜಿ. ಮಠಪತಿ ಹಾಗೂ ಮಹಿಳಾ ಉಪಾಧ್ಯಕ್ಷೆ ಎಸ್.ಎ. ಮೆಟಗುಡ್ಡ ನಿರ್ದೇಶಕ ಎಸ್.ಎಸ್. ಪುರವಾರ, ವಿ.ಎ. ವರ್ಚಗಲ್, ಮಂಜು ಪರೀಟ್, ಮಂಜು ಅಮೋಜಿ, ಇಂದುಮತಿ ಅಲ್ಲಾಪೂರ, ರಾಜೇಶ್ವರಿ ಕಂಕನೋಡಿ, ರೇಣುಕಾ ಬೆಳಗಲಿ, ಜ್ಯೋತಿ ಶೇಡಬಾಳ ಉಪಸ್ಥಿತರಿದ್ದರು.

ನೂತನ ಅಧಕ್ಷೆ ಲಲಿತಾ ಲಲಿತಾ ಹೊಸಮನಿ ಅವರಿಗೆ ನಿಕಟಪೂರ್ವ ಅಧಕ್ಷ ಪ್ರಕಾಶ ಬೆಳಗಲಿ ಅಧಿಕಾರ ಹಸ್ತಾಂತರಿಸಿದರು.