ಜಿಲ್ಲೆ

ತಿಂಡಿ ತಿನ್ನುವ ವಿಚಾರವಾಗಿ ಕೋಪ ಮಾಡಿಕೊಂಡ ಮಹಿಳೆ ಆತ್ಮಹತ್ಯೆ

Gadag - Desk - Tippanna Avadoot

ರಾಣೆಬೆನ್ನೂರ: ತಿಂಡಿ ತಿನ್ನುವ ವಿಚಾರವಾಗಿ ಕೋಪ ಮಾಡಿಕೊಂಡ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಯ ಮೃತ್ಯುಂಜಯ ನಗರದಲ್ಲಿ ಶುಕ್ರವಾರ ನಡೆದಿದೆ.

ಅಂಜಲಿ ಬಸವರಾಜ ಪಾಟೀಲ (22) ಮೃತ ಮಹಿಳೆ. ಈಕೆ ಮನೆಯಲ್ಲಿ ತಿಂಡಿ ತಿನ್ನುವ ವಿಚಾರಕ್ಕೆ ಜಗಳ ತೆಗೆದು ಕೋಪದಿಂದ ರೂಮ್ೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.