ಬಾಳೆಹೊನ್ನೂರಿನ ಇಟ್ಟಿಗೆ ಸೀಗೋಡಿನಲ್ಲಿ ವಾಲಿಬಾಲ್ ಪಂದ್ಯಾವಳಿಯನ್ನು ಪಿಎಸ್‌ಐ ವಿ.ಟಿ.ದಿಲೀಪ್‌ಕುಮಾರ್ ಉದ್ಘಾಟಿಸಿದರು. ಅರುಣೇಶ್, ಮಧುಸೂದನ್, ಮಹೇಶ್, ಕೇಶವಗೌಡ ರಮೇಶ್ ಇದ್ದರು. 
ಜಿಲ್ಲೆ

ಆದರ್ಶನಗರಕ್ಕೆ ಸುಸಜ್ಜಿತ ಕ್ರೀಡಾಂಗಣ

ಎಸ್.ಎನ್.ರವೀಂದ್ರ

ಬಾಳೆಹೊನ್ನೂರು: ಬಿ.ಕಣಬೂರು ಗ್ರಾಪಂ ಆದರ್ಶ ನಗರದಲ್ಲಿ ಸಾರ್ವಜನಿಕರು, ಕ್ರೀಡಾಪಟುಗಳಿಗಾಗಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಿಕೊಡುವುದಾಗಿ ಶಾಸಕ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.

ಇಟ್ಟಿಗೆ ಸೀಗೋಡು ಗ್ರಾಮದಲ್ಲಿ ಆದರ್ಶ ಯುವಕ ಸಂಘ ಶನಿವಾರ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಗ್ರಾಮೀಣ ಜನರು ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇದಕ್ಕಾಗಿ ಗ್ರಾಮಕ್ಕೆ ಉತ್ತಮ ಕ್ರೀಡಾಂಗಣ ನಿರ್ಮಿಸಿಕೊಡಲಾಗುವುದು ಎಂದರು. ಪಿಎಸ್‌ಐ ವಿ.ಟಿ.ದಿಲೀಪ್‌ಕುಮಾರ್ ಮಾತನಾಡಿ, ಕ್ರೀಡಾಕೂಟಗಳು ಗ್ರಾಮೀಣ ಜನರನ್ನು ಒಗ್ಗೂಡಿಸುತ್ತವೆ ಎಂದು ಹೇಳಿದರು. ಗ್ರಾಪಂ ಸದಸ್ಯರಾದ ಎಂ.ಎಸ್.ಅರುಣೇಶ್, ಬಿ.ಕೆ.ಮಧುಸೂದನ್, ಮಹೇಶ್, ಕಾಫಿ ಬೆಳೆಗಾರ ಕೆ.ಸಿ.ಕೇಶವ ಗೌಡ, ಮಕ್ಕಳ ತಜ್ಞ ಡಾ. ಎಂ.ಬಿ.ರಮೇಶ್, ತಾಪಂ ಮಾಜಿ ಸದಸ್ಯ ಹೊಳೆಬಾಗಿಲು ಮಂಜು, ಆದರ್ಶ ಯುವಕ ಸಂಘದ ಸಂದೇಶ್, ಕಾರ್ತಿಕ್ ಕಾರ್ಗದ್ದೆ, ಮಧುಸೂದನ್, ಎಸ್.ಕೆ.ವೆಂಕಟೇಶ್ ಇತರರಿದ್ದರು.