ಜಿಲ್ಲೆ

ಹಳ್ಳದ ನೀರಿಗೆ ಕೊಚ್ಚಿಹೋದ ಎಮ್ಮೆ ಸಾವು

Davangere - Desk - Ganesh M K

ನ್ಯಾಮತಿ: ತಾಲೂಕಿನಾದ್ಯಂತ ಮಂಗಳವಾರ ಸುರಿದ ಭಾರಿ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಆರುಂಡಿ ಗ್ರಾಮದಲ್ಲಿ ಎಮ್ಮೆಯೊಂದು ಮೃತಪಟ್ಟಿದೆ.

ಎಂದಿನಂತೆ ಎಮ್ಮೆಗಳನ್ನು ಮೇಯಿಸಿಕೊಂಡು ಮನೆಗೆ ವಾಪಸ್ ಬರುವ ವೇಳೆ ಗ್ರಾಮದ ಹಳ್ಳ ತುಂಬಿ ಸೇತುವೆ ಮುಳುಗಡೆಯಾಗಿತ್ತು. ನಾಲ್ಕು ಎಮ್ಮೆಗಳು ಹಳ್ಳದ ನೀರಿನ ಸೆಳೆತಕ್ಕೆ ಅರ್ಧ ಕಿಲೋ ಮೀಟರ್‌ಗೂ ಅಧಿಕ ದೂರ ಕೊಚ್ಚಿಹೋಗಿದ್ದು, 3 ಎಮ್ಮೆಗಳು ಪ್ರಾಣಾಪಾಯದಿಂದ ಪಾರಾಗಿ 1 ಎಮ್ಮೆ ಮೃತಪಟ್ಟಿದೆ.

ಕಳೆದ ಭಾನುವಾರದಿಂದ ಸುರಿಯುತ್ತಿರುವ ಮೊಗೆ ಮಳೆಗೆ ರೈತರಿಗೆ ಸಂಕಷ್ಟ ತಂದೊಡ್ಡಿದೆ. ಆರುಂಡಿ ಗ್ರಾಮದ ಸುರೇಶ್ ಕೊಯ್ಲು ಮಾಡಿ ಹಾಕಿದ್ದ ಟೊಮ್ಯೊಟೊ ರಾಶಿ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ.