ಜಿಲ್ಲೆ

ಸಾಮಾಜಿಕ ಕಾರ್ಯಕರ್ತನಿಂದ ಸ್ವಚ್ಛ ವಿಧಾನಸಭೆಗಾಗಿ ಪಾದಯಾತ್ರೆ

ಶ್ರೀನಿವಾಸಪುರ; ರಾಜ್ಯದಲ್ಲಿ "ಭ್ರಷ್ಟ ರಾಜಕೀಯ ವ್ಯವಸ್ಥೆ ತೊಲಗಿಸಿ, ಪ್ರಜಾಪ್ರಭುತ್ವ ಉಳಿಸಿ, ನಾಡನ್ನು ರಕ್ಷಿಸಿ' ಎಂಬ ಧ್ಯೇಯದೊಂದಿಗೆ ಎಲ್ಲ ವಿಧಾನಸಭೆ ಕ್ಷೇತ್ರಗಳಿಗೆ "ಸ್ವಚ್ಛ ವಿಧಾನಸಭಾ' ಅಭಿಯಾನ ಹಮ್ಮಿಕೊಂಡಿರುವ ಬಾಗಲಕೋಟೆ ಜಿಲ್ಲೆಯ ನಾಗರಾಜ ಶಿ. ಕಲಕುಟಗರ ಅವರು ಶುಕ್ರವಾರ ರಾತ್ರಿ ಚಿಂತಾಮಣಿಯಿಂದ ಕಾಲ್ನಡಿಗೆ ಮೂಲಕವೇ ಶ್ರೀನಿವಾಸಪುರ ತಾಲೂಕಿಗೆ ಆಗಮಿಸಿ, ಜಾಗೃತಿ ಮೂಡಿಸಿದರು.

ಶ್ರೀನಿವಾಸಪುರದ ಸಂಯುಕ್ತ ಪ್ರಗತಿ ಪ್ರೌಢಶಾಲೆಯಲ್ಲಿ ಶನಿವಾರ ಬೆಳಗ್ಗೆ ಹಮ್ಮಿಕೊಂಡಿದ್ದ ಸ್ವಚ್ಛ ವಿಧಾನಸಭಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ$್ಯ, ಸಮಾನತೆ, ಪ್ರಜಾಪ್ರಭುತ್ವ ಉಳಿವಿಗಾಗಿ ಭ್ರಷ್ಟಾಚಾರಮುಕ್ತ, ಪಾರದರ್ಶಕ, ಜನಪರ ಆಡಳಿತಕ್ಕಾಗಿ ಇರುವ ರಾಜಕಾರಣವೇ ಶ್ರೇಷ್ಠ. ಇದನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಸ್ವಚ್ಛ ವಿಧಾನಸಭಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಅದರಂತೆ ೆ.16ರಂದು ಬೆಂಗಳೂರಿನ ಫ್ರೀಡಂ ಪಾರ್ಕ್​ನಿಂದ ಅಭಿಯಾನ ಆರಂಭಿಸಿದ್ದು, ರಾಜ್ಯದ 31 ಜಿಲ್ಲೆಗಳ 224 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 3,500 ಕಿ.ಮೀ ಪಾದಯಾತ್ರೆಯ ಮೂಲಕವೇ ತೆರಳಿ, ಅರಿವು ಮೂಡಿಸಲಾಗುವುದು. ಅ.25ರಂದು ಫ್ರೀಡಂ ಪಾರ್ಕ್​ಗೆ ಮರಳಿ, ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಪಾದಯಾತ್ರೆಯನ್ನು ಪೂರ್ಣಗೊಳಿಸಲಾಗುವುದು ಎಂದರು.

ಕೆಆರ್​ಎಸ್​ ಪಕ್ಷದ ತಾಲೂಕು ಅಧ್ಯಕ್ಷ ಜಿ.ಎಂ.ಆಂಜನೇಯಪ್ಪ ಮಾತನಾಡಿ, ನೋಟಿಗಾಗಿ ವೋಟು ಬೇಡ. ಭ್ರಷ್ಟರಾಜಕೀಯದ ಬದಲಾವಣೆಗೆ ವೋಟು ನೀಡಿ. ಚುನಾವಣೆಯಲ್ಲಿ ಜೆಸಿಬಿ ಭ್ರಷ್ಟರನ್ನು ತೊಲಗಿಸಿ ನಾಡಪ್ರೇಮಿಗಳನ್ನು ಉಳಿಸಿ. ನೋಟಿಗಾಗಿ ಮಕ್ಕಳ ಭವಿಷ್ಯವನ್ನು ನಾಶಮಾಡಬೇಡಿ. ಬಡವರು ಮತ್ತು ಮಧ್ಯಮ ವರ್ಗದ ಮಕ್ಕಳು ಉತ್ತಮ ವಿದ್ಯಾಭ್ಯಾಸದೊಂದಿಗೆ ಉದ್ಯೋಗ ಪಡೆದುಕೊಂಡಾಗ ಮಾತ್ರ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ. ಎಲ್ಲರೂ ಒಂದುಗೂಡಿ ಒಗ್ಗಟ್ಟಾಗಿ ಹೋರಾಡೋಣ, ಪಾರದರ್ಶಕ ಮತದಾನದ ಮೂಲಕ ಸವೋರ್ದಯ ಕರ್ನಾಟಕ ನಿರ್ಮಿಸೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದ ಬಳಿಕ ಶ್ರೀನಿವಾಸಪುರದಿಂದ ಕೋಲಾರಿಗೆ ಪಾದಯಾತ್ರೆ ಮುಂದುವರಿಸಿದರು.