ಜಿಲ್ಲೆ

ಸಾಂಪ್ರದಾಯಿಕ ಮತಗಟ್ಟೆಗೆ ಭೇಟಿ

reportermys

ಮಡಿಕೇರಿ: ಜಿ.ಪಂ. ಸಿಇಒ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್.ಆಕಾಶ್ ಮತ್ತು ಭಾರತೀಯ ಮಾಹಿತಿ ಸೇವೆ(ಐಐಎಸ್) ವಿಭಾಗದ ಅಧಿಕಾರಿ ಪವನ್‌ರವರು ನಾಗರಹೊಳೆಯ ಸರ್ಕಾರಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ತೆರೆಯಲಾಗಿರುವ ಸಾಂಪ್ರದಾಯಿಕ ಮತಗಟ್ಟೆಗೆ ಶನಿವಾರ ಭೇಟಿ ನೀಡಿ ವೀಕ್ಷಿಸಿದರು.


ಜಿ.ಪಂ.ಯೋಜನಾ ನಿರ್ದೇಶಕ ಜಗದೀಶ್, ಆಶ್ರಮ ಶಾಲೆಯ ಪ್ರಾಂಶುಪಾಲರಾದ ಎನ್.ಎಸ್.ಬಸವರಾಜು, ಐಟಿಡಿಪಿ ಇಲಾಖೆಯ ತಾಲೂಕು ಅಧೀಕ್ಷಕರಾದ ನವೀನ್ ಕುಮಾರ್ ಇತರರು ಇದ್ದರು.