ಕೊಳ್ಳೇಗಾಲ ಶ್ರೀ ಮಹದೇಶ್ವರ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಕ್ರೈಸ್ತ ಸಭೆಗಳ ಏಕದಿನದ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಿದ ಪಟ್ಟಣದ ಸಂತ ಪ್ರಾನ್ಸಿಸ್ ಅಸಿಸ್ಸಿ ಸಭೆಯ ತಂಡಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಬಹುಮಾನ ವಿತರಣೆ ಮಾಡಿದರು. 
ಜಿಲ್ಲೆ

ಸಂತ ಫ್ರಾನ್ಸಿಸ್ ಅಸಿಸ್ಸಿ ಸಭೆಯ ತಂಡಕ್ಕೆ ಗೆಲುವು

ಕೊಳ್ಳೇಗಾಲ: ಪಟ್ಟಣದ ಶ್ರೀ ಮಹದೇಶ್ವರ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಕ್ರೈಸ್ತ ಸಭೆಗಳ ಏಕದಿನದ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಪಟ್ಟಣದ ಸಂತ ಫ್ರಾನ್ಸಿಸ್ ಅಸಿಸ್ಸಿ ಸಭೆಯ ತಂಡ ಗೆಲುವು ಸಾಧಿಸಿದ್ದು, ಹೊಸ ಹಂಪಾಪುರದ ಬೆಥೆಲ್ ಗಾರ್ಡ್ ಮಿನಿಸ್ಟ್ರಿ ಚರ್ಚ್ ತಂಡ ರನ್ನರ್‌ಅಪ್ ಪಡೆದಿದೆ.

ಕೊಳ್ಳೇಗಾಲ ತಾಲೂಕು ಕ್ರೈಸ್ತ ಒಕ್ಕೂಟ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯಲ್ಲಿ ಕೊಳ್ಳೇಗಾಲ ತಾಲೂಕಿನ ವಿವಿಧ ಚರ್ಚ್‌ಗಳ 15 ತಂಡ ಪಾಲ್ಗೊಂಡಿತ್ತು. ಬೆಳಗ್ಗೆ 10 ರಿಂದ 5 ಗಂಟೆವರೆವಿಗೂ ರೋಚಕ ಪಂದ್ಯಗಳು ನಡೆಯಿತು. ಫೈನಲ್ ಪಂದ್ಯಾವಳಿಯಲ್ಲಿ ಪಟ್ಟಣದ ಸಂತ ಫ್ರಾನ್ಸಿಸ್ ಅಸಿಸ್ಸಿ ಸಭೆಯ ಹಾಗೂ ಹೊಸ ಹಂಪಾಪುರದ ಬೆಥೆಲ್ ಗಾರ್ಡ್ ಮಿನಿಸ್ಟ್ರಿ ಚರ್ಚ್ ತಂಡ ಸೆಣಸಾಡಿದವು. ಸಂತ ಪ್ರಾನ್ಸಿಸ್ ಅಸಿಸ್ಸಿ ಸಭೆಯ ತಂಡದ ಕ್ರೀಡಾಪಟುಗಳು ರೋಚಕ ಪ್ರದರ್ಶನ ನೀಡಿ ಹೊಸ ಹಂಪಾಪುರದ ಬೆಥೆಲ್ ಗಾರ್ಡ್ ಮಿನಿಸ್ಟ್ರಿ ಚರ್ಚ್ ತಂಡವನ್ನು ಮಣಿಸಿದರು.

ವಿಜೇತ ತಂಡಕ್ಕೆ ಟ್ರೋಫಿ ಹಾಗೂ ನಗದು ಬಹುಮಾನವನ್ನು ವಿತರಿಸಿದ ಬಳಿಕ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಚಾಮರಾಜನಗರ ಜಿಲ್ಲೆ ಕಲೆ ಹಾಗೂ ಕ್ರೀಡೆಗೆ ಹೆಸರು ವಾಸಿಯಾಗಿದೆ. ತಾಲೂಕು ಕ್ರೈಸ್ತ ಒಕ್ಕೂಟವು ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಿರುವುದು ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಿದಂತಾಗಿದೆ ಎಂದರು.

ಬೆಥೆಲ್ ಲೂಥರನ್ ಚರ್ಚ್ ಸಭೆಯ ಸಭಾಪಾಲಕ ರೆವೆರೆಂಡ್ ಜೋಶುವ ಪ್ರಸನ್ನ ಕುಮಾರ್, ಸೇಂಟ್ ಫ್ರಾನ್ಸಿಸ್ ಅಸಿಸ್ಸಿ ಸಭೆಯ ವಂದನೀಯ ಗುರು ರಾಯಪ್ಪ, ನಗರಸಭೆ ಸದಸ್ಯರಾದ ಮಂಜುನಾಥ್, ರಾಮಕೃಷ್ಣ, ರಾಘವೇಂದ್ರ, ನಗರಸಭೆ ನಾಮ ನಿರ್ದೇಶಿತ ಸದಸ್ಯ ಸ್ವಾಮಿ ನಂಜಪ್ಪ, ಮುಖಂಡರಾದ ಅಕ್ತರ್ ಪಾಷ, ಚೇತನ್ ದೊರೈರಾಜ್, ಅನ್ಸರ್, ತಾಲೂಕು ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಅಂತೋಣಿ ದಿನೇಶ್, ಉಪಾಧ್ಯಕ್ಷ ಜೆ.ಎಂ.ಕಿರಣ್ ಕುಮಾರ್, ಖಂಜಾಚಿ ಜೆ.ವಿಜಯಕುಮಾರ್, ಕಾರ್ಯದರ್ಶಿ ತೇಜ್‌ಪಾಲ್, ನಿರ್ದೇಶಕರಾದ ಮಿಲ್ಟನ್ ಕ್ರಿಸ್ಟೋಫರ್, ವಿನೋದ್ ಕುಮಾರ್, ರಾಜೇಂದ್ರ ಬಾಬು, ಸಿ.ನಾಗರಾಜು, ಆರ್.ಪಿ.ನರೇಂದ್ರನಾಥ್, ಸಹ ಕಾರ್ಯದರ್ಶಿ ಎಚ್.ನಾಗರಾಜು, ಎಂ.ಜೆ.ಉದಯ್ ಕುಮಾರ್ ಇತರರು ಇದ್ದರು.