ಬೆಂಗಳೂರು: ದೇಶದ ಹೆಮ್ಮೆಯ ಆಯುರ್ವೇದ ಉತ್ಪನ್ನಗಳ ಸಂಸ್ಥೆಯಾದ ವ್ಯಾಲ್ಯೂ ಪ್ರಾಡಕ್ಟ್ ಸಂಸ್ಥೆ, ಅಯೋಧ್ಯೆಯಲ್ಲಿ ಅಮೃತ್ನೋನಿ ಗಿಡ ನೆಡುವ ಮೂಲಕ ಹೊಸ ಸಾಂಸತಿಕ ಪರಿವರ್ತನೆಗೆ ಮುನ್ನುಡಿ ಬರೆದಿದೆ.
"ಆಯುಷ್ ವನ್' ಮತ್ತು "ಎಕ್ ಪೇಡ್ ಮಾ ಕೆ ನಾಮ್' ಕಾರ್ಯಕ್ರಮದಡಿ ಅಯೋಧ್ಯೆಯ ಮುಖ್ಯ ಅರಣ್ಯಾಧಿಕಾರಿ ಪ್ರಣವ್ ಜೈನ್ ಮಾರ್ಗದರ್ಶನದಲ್ಲಿ ಜು.22ರಂದು ಅಯೋಧ್ಯೆಯ ಟಿಎಲ್ಎಂ ಸಂಸ್ಥೆಯ ಸೌಧದದಲ್ಲಿ ನೋನಿ ಮೊರಿಂಡಾ ಸಿಟ್ರಿೋಲಿಯಾ ಗಿಡವನ್ನು ನೆಡಲಾಯಿತು. ಇದೇ ವೇಳೆ ಅನಂತ್ಕುಮಾರ್ ಮತ್ತು ಡಾ.ತೇಜಸ್ವಿನಿ ಅನಂತ್ ಕುಮಾರ್ ಸ್ಥಾಪಿಸಿರುವ "ಅದಮ್ಯ ಚೇತನ' ಮುನ್ನಡೆಸುತ್ತಿರುವ "ಅಯೋಧ್ಯೆಯಲ್ಲಿ ಸಸ್ಯಾಗ್ರಹ' ಎಂಬ ಪರಿಸರ ಸಂರಕ್ಷಣೆಯ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಅಯೋಧ್ಯೆಯ ವಿವಿಧ ಸ್ಥಳಗಳಲ್ಲಿ ಅಮೃತ್ ನೋನಿ, ಸೀತಾ ಅಶೋಕ ಮತ್ತು ಸಿಂಸಾಹ ಗಿಡಗಳನ್ನು ನೆಡುವ ಮೂಲಕ "ಅಯೋಧ್ಯೆಯಲ್ಲಿ ಸಸ್ಯಾಗ್ರಹ' ಯೋಜನೆಗೂ ಸಂಸ್ಥೆ ಕೈಜೋಡಿಸಿದೆ.
ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ನೋನಿ ಗಿಡವು ರಾಮಾಯಣ ಮತ್ತು ವೇದಕಾಲದಿಂದ ಇದ್ದರೂ ಅದನ್ನು ನಮಗೆಲ್ಲರಿಗೂ ಪರಿಚಯ ಮಾಡಿಕೊಟ್ಟು, ಅದರ ಪ್ರಯೋಜನವನ್ನು ಜಗತ್ತಿಗೆ ಸಾರಿದವರು ಅಮೃತ್ ನೋನಿ ಸಂಸ್ಥೆಯ ಶ್ರೀನಿವಾಸ ಮೂರ್ತಿ, ಅಂಬುಜಾ ದಂಪತಿ ಮತ್ತು ಕುಟುಂಬದವರು ಎಂದು ಪ್ರಶಂಸಿದರು.
ನೋನಿ ಗಿಡವನ್ನು ಅಮೃತ್ ನೋನಿಯಾಗಿ ಮಾಡುವ ಮೂಲಕ ದೇಶದ ಪ್ರತಿ ಮನೆಗೂ ತಲುಪಿಸಿದ್ದಾರೆ. ಹನುಮನ ನಾಡಿನವರಾಗಿ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ನೋನಿ ಗಿಡ ನೆಡುವ ಮೂಲಕ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದ್ದಾರೆ ಎಂದರು. ವಿಶ್ವ ಹಿಂದು ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಗೋಪಾಲ್, ಮಾಜಿ ಸಂಸದ ಲಲ್ಲುಸಿಂಗ್, ಉತ್ತರ ಪ್ರದೇಶದ ಸರ್ಕಾರದ ಕೃಷಿ, ಅಂಕಿ& ಅಂಶಗಳ ಇಲಾಖೆ ನಿರ್ದೇಶಕ ಡಾ. ಸುಮಿತ್ ಸಿಂಗ್, ಒರಿಸ್ಸಾದ ಕೇಂದ್ರೀಯ ವಿಶ್ವವಿದ್ಯಾಲಯದ ಕೊರಾಪುಟ್ನ ಕುಲಪತಿ ಪಿ.ವಿ. ಕೃಷ್ಣಭಟ್ ಮತ್ತಿತರರಿದ್ದರು