ಜಿಲ್ಲೆ

ಯುದ್ಧ ಸ್ಮಾರಕಕ್ಕೆ ಗೌರವ ನಮನ

ಆದರ್ಶ್. ಎಂ.ಕೆ.

ಮಡಿಕೇರಿ: ನಗರದ ಮಂಗೇರಿ ಮುತ್ತಣ್ಣ ವೃತ್ತದ ಸಮೀಪವಿರುವ ಯುದ್ಧ ಸ್ಮಾರಕಕ್ಕೆ ನಿವೃತ್ತ ಯೋಧರು, ಹಿಂದು ಜಾಗರಣ ವೇದಿಕೆ ಹಾಗೂ ದೇಶಾಭಿಮಾನಿಗಳು ಪುಷ್ಪರ್ಚನೆ ಮಾಡಿ ಗೌರವ ನಮನ ಸಲ್ಲಿಸಿ, ಸೈನಿಕರ ತ್ಯಾಗ ಬಲಿದಾವನ್ನು ಸ್ಮರಿಸಿದರು.


ಈ ಸಂದರ್ಭದಲ್ಲಿ ಭಾರತೀಯ ನೌಕಾದಳದ ನಿವೃತ್ತ ಸೇನಾಧಿಕಾರಿ ಚೋಂಡಿರ ಸುರೇಶ್ ಮಾತನಾಡಿ, ಯೋಧರು ಗಡಿಯಲ್ಲಿದ್ದು, ನಮ್ಮ ಜೀವವನ್ನು ಉಳಿಸುವ ಕೆಲಸ ಮಾಡುತ್ತಿದ್ದರು. ಅವರನ್ನು ನಿತ್ಯ ಸ್ಮರಿಸುವುದರ ಜತೆಗೆ ಮುಂದಿನ ಪಿಳಿಗೆಗೆಗೂ ಇವರ ಬಗ್ಗೆ ಅರಿವು ಮೂಡಿಸಬೇಕೆಂದರು.

ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು, ಗಣ್ಯರು ಹಾಗೂ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.