ಲಯನ್ಸ್ ಕಾಲೇಜಿನಿಂದ ಎನ್‌ಟಿಎ (ನ್ಯಾಷಿನಲ್ ಟೆಸ್ಟಿಂಗ್ ಏಜೆನ್ಸಿ) ನಡೆಸುವ ಐಐಟಿ-ಜೆಇಇ ಆಡ್ವಾನ್ಸ್ ಪರೀಕ್ಷೆಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಗುರುವಾರ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದೆ. ಜಿ.ಎಸ್.ಎಂ ಪ್ರಸಾದ್, ಗಿರಿರಾಜನ್, ವಿನುತಾ, ಸ್ಯಾಮ್‌ಸನ್ ಇದ್ದಾರೆ.  
ಜಿಲ್ಲೆ

ಲಯನ್ಸ್ ಕಾಲೇಜಿನ ವಿದ್ಯಾರ್ಥಿಗಳಿಗೆ ಸನ್ಮಾನ

ಕೊಳ್ಳೇಗಾಲ: ಪಟ್ಟಣದ ಲಯನ್ಸ್ ಕಾಲೇಜಿನಿಂದ ಎನ್‌ಟಿಎ (ನ್ಯಾಷಿನಲ್ ಟೆಸ್ಟಿಂಗ್ ಏಜೆನ್ಸಿ) ನಡೆಸುವ ಐಐಟಿ-ಜೆಇಇ ಆಡ್ವಾನ್ಸ್ ಪರೀಕ್ಷೆಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಗುರುವಾರ ಸನ್ಮಾನಿಸಿ ಅಭಿನಂದಿಸಿದೆ.


2024ನೇ ಸಾಲಿನ ಐಐಟಿ-ಜೆಇಇ ಆಡ್ವಾನ್ಸ್ ಪ್ರವೇಶ ಪರೀಕ್ಷೆ ಬರೆಯಲು ಕಾಲೇಜಿನ ಆರ್.ಜೀವಿತ, ಮನೋಜ್, ಅಭಿಸಾಗರ್, ಶೋಭಿತ, ಸ್ಪೂರ್ತಿ, ರಕ್ಷಿತ ಹಾಗೂ ಪ್ರತೀಕ್ಷಾ ಆಯ್ಕೆಯಾಗಿದ್ದಾರೆ.

ಅತಿ ಹೆಚ್ಚು ಅಂಕಗಳನ್ನು ಪಡೆದು ಐಇಟಿ-ಜೆಇಇ ಆಡ್ವಾನ್ಸ್ ಪ್ರವೇಶಕ್ಕೆ ಅರ್ಹತೆಗಳಿಸಿ ಕಾಲೇಜಿಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳಿಗೆ ಲಯನ್ಸ್ ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಜಿ.ಎಸ್.ಎಂ ಪ್ರಸಾದ್, ಖಂಚಾಚಿ ಗಿರಿರಾಜನ್, ಪ್ರಾಂಶುಪಾಲ ವಿನುತಾ, ಉಪನ್ಯಾಸಕರಾದ ಸ್ಯಾಮ್‌ಸನ್, ಧನಲಕ್ಷ್ಮಿ, ಪ್ರಸನ್ನ ಕುಮಾರ್, ಪವನ್‌ರಾಜ್ ಅಭಿನಂದನೆ ಸಲ್ಲಿಸಿದರು.