ಜಿಲ್ಲೆ

ಕನ್ಯೆನೊಡಲು ಹೊರಟವರ ಮೇಲೆ ಬಿದ್ದ ಮರ

ತುಮಕೂರು ಡೆಸ್ಕ್

ಹುಲಿಯೂರುದುರ್ಗ: ಹೆಣ್ಣು ನೊಡಲು ಬೈಕ್​ನಲ್ಲಿ ತೆರಳುತಿದ್ದವರ ಮೇಲೆ ಮರ ಬಿದ್ದು ಇಬ್ಬರು ಗಂಭೀರ ಗಾಯಗೊಂಡಿರುವ ಟನೆ ಕುಣಿಗಲ್​ ತಾಲೂಕಿನ ಕೆಂಬಾರೆಪಾಳ್ಯದ ಬಳಿ ಬುಧವಾರ ನಡೆದಿದೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೆಕ್ಕಳಲೆ ರುದ್ರೆಗೌಡನ ಕೊಪ್ಪಲು ಗ್ರಾಮದ ಹೇಮಗಿರಿಗೌಡ(63), ಅವರ ಅಣ್ಣನ ಮಗ ರಾಮಕೃಷ್ಣ (30) ಗಾಯಗೊಂಡವರು. ಬುಧವಾರ ಹುಲಿಯೂರುದುರ್ಗದ ಬೆಕ್ಕಳಲೆ ಗ್ರಾಮದಿಂದ ರಾಜ್ಯ ಹೆದ್ದಾರಿ 33ರ ಮಾರ್ಗವಾಗಿ ರಾಮಕೃಷ್ಣಗೆ ಹೆಣ್ಣು ನೋಡಲು ತೆರಳುತ್ತಿದ್ದರು. ಕೆಂಬಾರೆಪಾಳ್ಯದ ರಸ್ತೆಯ ಬದಿಯಲ್ಲಿದ್ದ ಮರ ಏಕಾಏಕಿ ದ್ವಿಚಕ್ರ ವಾಹನದ ಮೇಲೆ ಬಿದ್ದು ಅವಘಡ ಸಂಭವಿಸಿದೆ. ಮರ ಬಿದ್ದ ರಭಸಕ್ಕೆ ಬೈಕ್​ ಜಖಂ ಗೊಂಡಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸ್ಥಳಿಯರು ರಕ್ಷಣೆ ಮಾಡಿ ಕುಣಿಗಲ್​ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಬೆಂಗಳೂರಿಗೆ ಕರೆದೊಯ್ದ್ದಿದ್ದಾರೆ.