ಕೊಪ್ಪ ಹಾಗೂ ಚಿಕ್ಕಮಗಳೂರು ಸಂಪರ್ಕ ಸಾಧಿಸುವ ರಸ್ತೆಯಲ್ಲಿ ಬೃಹತ್ ಗಾತ್ರದ ಮರ ಬಿದ್ದು ಸಂಚಾರ ಸ್ಥಗಿತಗೊಂಡಿತ್ತು. 
ಜಿಲ್ಲೆ

ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತ

ಜಿ.ಹೆಚ್. ಧನ್ಯಕುಮಾರ್

ಕೊಪ್ಪ: ತಾಲೂಕಿನಾದ್ಯಂತ ಪುಷ್ಯ ಮಳೆ ಅಬ್ಬರ ಹೆಚ್ಚಾಗಿದ್ದು, ಭಾನುವಾರ ರಾತ್ರಿ ಗಾಳಿ ಸಹಿತ ಮಳೆಯಾಗಿದ್ದರಿಂದ ಮರಗಳು ಭೂಮಿಗೆ ಉರುಳಿದೆ. ಹಲವೆಡೆ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಸ್ತೆ ಮೇಲೆ ಮರ ಬಿದ್ದು ಸಂಚಾರಕ್ಕೆ ತೊಂದರೆ ಉಂಟಾಗಿದೆ.
ತಾಲೂಕಿನ ದೇವನ್ ಎಸ್ಟೇಟ್, ತಲಮಕ್ಕಿ, ಸಣ್ಣಕೆರೆ ಭಾಗದಲ್ಲಿ ವಿದ್ಯುತ್ ತಂತಿ ಮೇಲೆ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮೇಗುಂದ ಹೋಬಳಿಯ ಹೆಬ್ಬಾರು ಗ್ರಾಮದ ಹೆಗ್ಗಾರು ಕೊಡಿಗೆ, ನಾರ್ವೆ ಸಮೀಪ ಬೃಹತ್ ಗಾತ್ರದ ಮರ ರಸ್ತೆಗೆ ಬಿದ್ದ ಪರಿಣಾಮ ಒಂದು ಗಂಟೆ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಮೇಲ್ಪಾಲ್ ಸಮೀಪದ ಅರಳಿಕೊಪ್ಪದಲ್ಲಿ ಮರ ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಹಿರೇಗದ್ದೆ ಗ್ರಾಮ ಕೂವೆ ವಾಸಿ ಅಣ್ಣು ರವರ ಮನೆ ಸಮೀಪ ಧರೆ ಜರುಗಿದೆ.
ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ನಾರ್ವೆ, ಅಂಬಳಿಕೆ ಹಾಗೂ ನದಿ ಪಾತ್ರದ ಗ್ರಾಮದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಕೆಲವೆಡೆ ನದಿ ಪಾತ್ರದಲ್ಲಿರುವ ತೋಟಗಳಿಗೆ ನೀರುಗಳು ನುಗ್ಗಿವೆ. ಕೊಪ್ಪದಲ್ಲಿ ಸೋಮವಾರದ ವರೆಗೆ 45.65 ಇಂಚು ಮಳೆಯಾಗಿದೆ.