ಮುಂಡರಗಿ ಪಟ್ಟಣದಲ್ಲಿ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಬೇವಿನ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ತುಂಡಾಗಿ ನೆಲಕ್ಕುರುಳಿವೆ. 
ಜಿಲ್ಲೆ

ಮರದ ಟೊಂಗೆ ಬಿದ್ದು ವಿದ್ಯುತ್ ಕಂಬಕ್ಕೆ ಹಾನಿ

ಸೋಮನಾಥ ರೆಡ್ಡಿ

ಮುಂಡರಗಿ: ಮಳೆಯಿಂದಾಗಿ ಪಟ್ಟಣದ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ದೊಡ್ಡ ಬೇವಿನ ಮರದ ಟೊಳ್ಳಾದ ಕೊಂಬೆಯೊಂದು ಮುರಿದು ಪಕ್ಕದಲ್ಲಿದ್ದ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ಎರಡು ಕಂಬಗಳು ತುಂಡಾದ ಘಟನೆ ಶುಕ್ರವಾರ ಸಂಭವಿಸಿದೆ.

ಘಟನೆಯಿಂದ ಶಾಲೆಯ ತಡೆಗೋಡೆಗೆ ಅಲ್ಪಮಟ್ಟಿಗೆ ಹಾನಿಯಾಗಿದೆ. ಯೋಗ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ಬೆಳಗ್ಗೆ ಯೋಗಾಭ್ಯಾಸ ಮುಗಿಸಿ ಮಧ್ಯಾಹ್ನದ ವೇಳೆಗೆ ಮನೆಗೆ ತೆರಳಿದ್ದರಿಂದ ಯಾವುದೆ ಅನಾಹುತ ಸಂಭವಿಸಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ಹೆಸ್ಕಾಂ ಪ್ರಭಾರಿ ಎಇಇ ಚನ್ನಪ್ಪ ಲಮಾಣಿ, ಮಳೆಯಿಂದ ಹಳೆದಾದ ಮರದ ಕೊಂಬೆಯು ವಿದ್ಯುತ್ ಲೈನ್ ಮೇಲೆ ಬಿದ್ದು ಎರಡು ಕಂಬ ನೆಲಕ್ಕುರುಳಿವೆ. ತಕ್ಷಣ ದುರಸ್ತಿ ಕಾರ್ಯ ಕೈಗೊಂಡು ಹೊಸ ಕಂಬಗಳನ್ನು ಹಾಕಿ ವಿದ್ಯುತ್ ಲೈನ್ ಸರಿಪಡಿಸುವ ಕಾರ್ಯ ಮಾಡಲಾಗಿದೆ ಎಂದರು.