ಜಿಲ್ಲೆ

ಬೆಳ್ಳಿ ದೇಣಿಗೆ ನೀಡಿದವರಿಗೆ ಸತ್ಕಾರ

ಮರಿದೇವ ಹೂಗಾರ

ಹುಬ್ಬಳ್ಳಿ: ಇಲ್ಲಿಯ ದಾಜಿಬಾನಪೇಟೆಯ ಎಸ್‌ಎಸ್‌ಕೆ ಪಂಚ ಟ್ರಸ್ಟ್ ಶ್ರೀ ದುರ್ಗಾದೇವಿ ದೇವಸ್ಥಾನಕ್ಕೆ ಬೆಳ್ಳಿ ದೇಣಿಗೆ ನೀಡಿದ ಗಣ್ಯರನ್ನು ಬುಧವಾರ ಸತ್ಕರಿಸಲಾಯಿತು.

ಎಸ್‌ಆರ್‌ಎಂ ಶಾಮಿಯಾನ ಮಾಲೀಕ ಸುನಿತಾಬಾಯಿ ಸುಭಾಷ ಮೆಹರವಾಡೆ ಅವರು ದೇವಸ್ಥಾದ ಪಲ್ಲಕ್ಕಿಗಾಗಿ 1ಕೆಜಿ 48 ಗ್ರಾಂ ಚೊಕ್ಕ ಬೆಳ್ಳಿ ದೇಣಿಗೆ ನೀಡಿ ಶ್ರೀದೇವಿಯರಿಗೆ ಪೂಜೆ ಸಲ್ಲಿಸಿದರು. ನಂತರ ಸುನಿತಾಬಾಯಿ ಮೆಹರವಾಡೆ ಅವರನ್ನು ಸತ್ಕರಿಸಲಾಯಿತು.

ವಿಠ್ಠಲ ಮೆಹರವಾಡೆ, ರಾಮಚಂದ್ರ ಮೆಹರವಾಡೆ, ಶಾಮಸುಂದರ ಮೆಹರವಾಡೆ ದಂಪತಿ ಸಮೇತರಾಗಿ ಆಗಮಿಸಿ ಶ್ರೀದೇವಿಯರ ಆಶೀರ್ವಾದ ಪಡೆದರು.

ಟ್ರಸ್ಟ್ ಕಮಿಟಿ ಗೌರವ ಕಾರ್ಯದರ್ಶಿ ಭಾಸ್ಕರ ಜಿತೂರಿ, ಟ್ರಸ್ಟಿಗಳಾದ ಎನ್.ಆರ್. ಹಬೀಬ, ಎ.ಪಿ . ಪವಾರ ಇತರರು ಉಪಸ್ಥಿತರಿದ್ದರು.