ಕೊಟ್ಟೂರು ತಾಲೂಕಿನ ಚಿರಬಿ ಗ್ರಾಮದಲ್ಲಿ ಪ್ರಯಾಣಿಕರ ತಂಗುದಾಣ ಗಿಡಗಳಲ್ಲಿ ಮರೆಯಾಗಿರುವುದು. 
ಜಿಲ್ಲೆ

ಗಿಡಗಳಲ್ಲಿ ಮರೆಯಾದ ಪ್ರಯಾಣಿಕರ ತಂಗುದಾಣ

ಗಾಯತ್ರಿ ಮಾಲಿಪಾಟೀಲ್

ಕೊಟ್ಟೂರು: ಚಿರಬಿ ಗ್ರಾಮದಲ್ಲಿನ ಪ್ರಯಾಣಿಕರ ತಂಗುದಾಣ ಗಿಡಗಳಿಂದ ಮರೆಯಾಗಿದ್ದು, ಮುಳ್ಳು ಹಾಗೂ ತಿಪ್ಪೆಗುಂಡಿ ದಾಟಿಕೊಂಡು ಹೋಗಬೇಕಾಗಿದೆ. ತಂಗುದಾಣದಲ್ಲಿ ಒಳಗೆ ಕುಳಿತುಕೊಳ್ಳಲು ಜಾಗವಿಲ್ಲದಷ್ಟು ಗಲೀಜಾಗಿದೆ.

ಈ ತಂಗುದಾಣವನ್ನು 2010-11ರಲ್ಲಿ ಲೋಕಸಭಾ ಸದಸ್ಯೆ ಜೆ.ಶಾಂತಾ ಅವರ ಅವಧಿಯಲ್ಲಿ ನಿರ್ಮಿಸಲಾಗಿದೆ. ತಂಗುದಾಣದ ಸ್ವಚ್ಛತೆಗೆ ಗಾಪಂ ಆಡಳಿತ ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷಿಸಿದ್ದಾರೆ. ಇದರಿಂದಾಗಿ ಪ್ರಯಾಣಿಕರು ಬಿಸಿಲು, ಗಾಳಿ, ಮಳೆ ಏನೇ ಇದ್ದರೂ ಬಸ್‌ಗಾಗಿ ರಸ್ತೆ ಬದಿ ಕಾಯಬೇಕಾಗಿದೆ.