ಜಿಲ್ಲೆ

ಶಿರಸಿ-ಕುಮಟಾ ರಸ್ತೆಯಲ್ಲಿ ಕಂದಕಕ್ಕೆ ಉರುಳಿದ ಸಾರಿಗೆ ಬಸ್

ಶಿರಸಿ: ಶಿರಸಿ-ಕುಮಟಾ ಮುಖ್ಯ ರಸ್ತೆಯ ಹನುಮಂತಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಸಂಸ್ಥೆ ಬಸ್ ಶನಿವಾರ ಪಲ್ಟಿಯಾಗಿದೆ.

ಮಂಗಳೂರಿನಿಂದ ಶಿರಸಿಯತ್ತ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಹನುಮಂತಿ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗದ್ದೆಗೆ ಇಳಿದು ಪಲ್ಟಿ ಹೊಡೆದಿದೆ.

ಘಟನೆಯಿಂದ ಬಸ್​ನಲ್ಲಿದ್ದ ಹಲವು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಬಸ್ ಚಾಲಕನಿಗೆ ಗಂಭೀರವಾಗಿ ಗಾಯಗಳಾಗಿವೆ. ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.