ನಾಗೋಡಿ ಬಳಿ ವಿದ್ಯುತ್ ಕಂಬಕ್ಕೆ ಪ್ರವಾಸಿ ಬಸ್ ಡಿಕ್ಕಿಯಾಗಿರುವುದು. 
ಜಿಲ್ಲೆ

ವಿದ್ಯುತ್ ಕಂಬಕ್ಕೆ ಗುದ್ದಿದ ಪ್ರವಾಸಿ ಬಸ್

Shivamogga - Desk - Praveena Kumar S

ಹೊಸನಗರ: ತಾಲೂಕಿನ ನಿಟ್ಟೂರು ಸಮೀಪ ನಾಗೋಡಿಯಲ್ಲಿ ಶುಕ್ರವಾರ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಬಸ್ಸೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಬಸ್ಸು ತಮಿಳುನಾಡಿನ ವಂದವಾಸಿಯಿಂದ ಹುಂಚಾ ಯಾತ್ರೆ ಮುಗಿಸಿ ಕೊಲ್ಲೂರು ಕಡೆ ಸಾಗುತ್ತಿತ್ತು. ಬಸ್ಸಿನಲ್ಲಿ 51 ಜನರಿದ್ದು ಯಾವುದೇ ಅಪಾಯವಾಗಿಲ್ಲ. ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಿದೆ. ಎದುರಿಂದ ಬರುತ್ತಿದ್ದ ಬಸ್ ಮತ್ತು ಅಲ್ಲೇ ಇದ್ದ ಹಸುವೊಂದನ್ನು ತಪ್ಪಿಸಲು ಹೋಗಿ ಈ ಅವಘಡ ನಡೆದಿದೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.