ಜಿಲ್ಲೆ

ಇನ್ನೇನು ಶಾಲೆ ಒಳಗೆ ಹೋಗಬೇಕು ಅನ್ನುವಷ್ಟರಲ್ಲಿ ಬಾಲಕನ ಪ್ರಾಣ ಹೊತ್ತೊಯ್ದ ಜವರಾಯ!

arunakunigal

ಮಂಡ್ಯ: ಶಾಲೆಗೆ ಹೋಗುತ್ತಿದ್ದ ಬಾಲಕನ ಪ್ರಾಣವನ್ನು ಟಿಪ್ಪರ್​ ರೂಪದಲ್ಲಿ ಬಂದ ಜವರಾಯ ಹೊತ್ತೊಯ್ದ ದುರ್ಘಟನೆ ಮದ್ದೂರು ತಾಲೂಕಿನ ಅಡಿಗನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಮಧುಸೂದನ್(8) ಮೃತ ದುರ್ದೈವಿ. ಮಂಗಳವಾರ ಬೆಳಗ್ಗೆ ಶಾಲೆಗೆಂದು ಮನೆಯಿಂದ ಬಾಲಕ ಹೋಗುತ್ತಿದ್ದ. ಇದೇ ವೇಳೆ ಹೆದ್ದಾರಿ ಕಾಮಗಾರಿಗೆ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್​ ಬಾಲಕನಿಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಬಾಲಕ ಮೃತಪಟ್ಟಿದ್ದಾನೆ. ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.

ಅಪಘಾತಕ್ಕೀಡಾದ ಟಿಪ್ಪರ್​ ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣದ ಟೆಂಡರ್ ಪಡೆದಿರುವ ಡಿಬಿಎಲ್ ಕಂಪನಿಗೆ ಸೇರಿದೆ. ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.