ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ನಿಲ್ಲಿಸಿರುವ ಕಲ್ಲು ಸಾಗಣೆ ಮಾಡುತ್ತಿದ್ದ ಲಾರಿ. 
ಜಿಲ್ಲೆ

ಅಧಿಕ ತೂಕದ ಕಲ್ಲು ಸಾಗಣೆ ಮಾಡುತ್ತಿದ್ದ ಟಿಪ್ಪರ್ ವಶ

ಮಾದೇಶ್ ತಿ.ನರಸೀಪುರ

ಗುಂಡ್ಲುಪೇಟೆ: ಪರವಾನಗಿ ಇಲ್ಲದೆ ಅಧಿಕ ತೂಕದ ಕಲ್ಲು ಸಾಗಣೆ ಮಾಡುತ್ತಿದ್ದ ಟಿಪ್ಪರನ್ನು ಗಣಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ತಾಲೂಕಿನ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ನಿಲ್ಲಿಸಿದ್ದಾರೆ. ಗಣಿ ಇಲಾಖೆ ವಿಧಿಸುವ ದಂಡ ಪಾವತಿಸಿದ ನಂತರ ಟಿಪ್ಪರ್ ಬಿಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.